ಜೀವನ ಭದ್ರತೆ ಒದಗಿಸಲಿದೆ ವಿಮೆ

registration campaign
ಗಂಗಾವತಿ ತಾಲೂಕಿನ ಕಡೇಬಾಗಿಲುನಲ್ಲಿ ಆನೆಗೊಂದಿ ಗ್ರಾಪಂ ವ್ಯಾಪ್ತಿಯ ನರೇಗಾ ಕೂಲಿಕಾರರಿಗಾಗಿ ಹಮ್ಮಿಕೊಂಡಿದ್ದ ಸಾಮಾಜಿಕ ಭದ್ರತಾ ಯೋಜನೆಗಳ ಜಾಗೃತಿ ಅಭಿಯಾನದಲ್ಲಿ ಎಸ್‌ಬಿಐ ಆರ್ಥಿಕ ಸಾಕ್ಷರತಾ ಸಲಹೆಗಾರ ಟಿ.ಆಂಜನೇಯ ಮಾತನಾಡಿದರು. ವಿಜಯನಗರ ವಲಯ ಆರ್ಥಿಕ ಸೇರ್ಪಡೆ ವಿಭಾಗದ ಪ್ರತಿನಿಧಿ ಈರಣ್ಣ, ಎಸ್‌ಬಿಐ ಆನೆಗೊಂದಿ ಶಾಖೆ ವ್ಯವಸ್ಥಾಪಕ ರಂಜಿತ್ ಕುಮಾರ್ ಇತರರಿದ್ದರು.
Published on

ಗಂಗಾವತಿ: ಅಸಂಘಟಿತ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಪುರಸ್ಕೃತ ವಿಮೆ ಯೋಜನೆಗಳಿದ್ದು, ಜೀವನ ಭದ್ರತೆ ಒದಗಿಸಲಿವೆ ಎಂದು ಎಸ್‌ಬಿಐ ಆರ್ಥಿಕ ಸಾಕ್ಷರತಾ ಸಲಹೆಗಾರ ಟಿ.ಆಂಜನೇಯ ಹೇಳಿದರು.

ತಾಲೂಕಿನ ಕಡೇಬಾಗಿಲುನಲ್ಲಿ ಆನೆಗೊಂದಿ ಗ್ರಾಪಂ ವ್ಯಾಪ್ತಿಯ ನರೇಗಾ ಕೂಲಿಕಾರರಿಗಾಗಿ ಶನಿವಾರ ಹಮ್ಮಿಕೊಂಡಿದ್ದ ಸಾಮಾಜಿಕ ಭದ್ರತಾ ಯೋಜನೆಗಳ ಜಾಗತಿ ವಿಶೇಷ ನೋಂದಣಿ ಅಭಿಯಾನದಲ್ಲಿ ಮಾತನಾಡಿದರು.

ಕೂಲಿಕಾರರು, ರೈತರು, ಮಹಿಳೆಯರಿಗೆ ವಿಮೆ ಸೌಲಭ್ಯಗಳಿದ್ದು, ಪ್ರಧಾನಮಂತ್ರಿ ಜೀವನ್ ಜ್ಯೋತಿ, ಜೀವನ ಸುರಕ್ಷಾ ವಿಮೆ ಯೋಜನೆಗಳು ಸಹಕಾರಿಯಾಗಿವೆ. ವರ್ಷಕ್ಕೊಮ್ಮೆ ವಿಮೆ ಶುಲ್ಕ ಪಾವತಿಸಿದರೆ, ವರ್ಷದ ಅವಧಿಯಲ್ಲಿ ಸಾಮಾನ್ಯವಾಗಿ ಮರಣ ಹೊಂದಿದರೂ ಮತ್ತು ಅಪಘಾತದಲ್ಲಿ ಮರಣ ಹೊಂದಿದರೂ 2 ಲಕ್ಷ ರೂ.ವಿಮೆ ಸೌಲಭ್ಯ ವಾರಸುದಾರರಿಗೆ ದೊರೆಯಲಿದೆ ಎಂದರು.

ಎಸ್‌ಬಿಐ ಆನೆಗೊಂದಿ ಶಾಖೆ ವ್ಯವಸ್ಥಾಪಕ ರಂಜಿತ್ ಕುಮಾರ್ ಮಾತನಾಡಿ, ಗ್ರಾಹಕರಿಗಾಗಿ ಸಾಲ ಠೇವಣಿ ಜತೆಗೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸರ್ಕಾರ ರೂಪಿಸಿದೆ. 18ರಿಂದ 40 ವರ್ಷದ ಯುವಕ, ಯುವತಿಯರು ಅಟಲ್ ಪೆನ್ಷನ್ ಪಿಂಚಣಿ ಯೋಜನೆಯ ಲಾಭ ಪಡೆದುಕೊಳ್ಳಬಹುದಾಗಿದೆ ಎಂದರು.

ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ವಿಜಯನಗರ ವಲಯ ಆರ್ಥಿಕ ಸೇರ್ಪಡೆ ವಿಭಾಗದ ಪ್ರತಿನಿಧಿ ಈರಣ್ಣ ಮಾಹಿತಿ ನೀಡಿದರು. 50 ವಿಮೆ ಸೌಲಭ್ಯಗಳ ಅರ್ಜಿಗಳನ್ನು ವಿತರಿಸಲಾಯಿತು. ಕಾಯಕ ಬಂಧುಗಳಾದ ಸಂತೋಷ, ಆಕಾಶ, ಹನುಮಂತಪ್ಪ, ಲಿಂಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net