

ಗಂಗಾವತಿ: ಶಾಲಾಭಿವೃದ್ಧಿಗೆ ಕೆಕೆಆರ್‌ಡಿಬಿ ಯೋಜನೆಯಡಿ ಅನುದಾನ ಬಳಕೆಯಾಗಿದ್ದು, ಕ್ಷೇತ್ರದಲ್ಲಿ ಅತಿ ಹೆಚ್ಚು ಶಾಲಾ ಕೊಠಡಿಗಳನ್ನು ನಿರ್ಮಿಸಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ನಗರದ ಹಿರೇಜಂತಕಲ್ ಸ.ಹಿ.ಪ್ರಾ. ಶಾಲೆಯಲ್ಲಿ ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯಡಿ ಮಂಜೂರಾದ ಹೆಚ್ಚುವರಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಹಿರೇಜಂತಕಲ್ ಉನ್ನತೀಕರಣ, ಸ.ಕಿ.ಪ್ರಾ.ಶಾ. ಆಶ್ರಯ ಕಾಲನಿ, ಆಗ್ರಿ ಾರ್ಮ್, ಲಕ್ಷ್ಮೀಕ್ಯಾಂಪ್, ಸೂರ್ಯನಾಯಕನ ತಾಂಡಾ ಸೇರಿ 48 ಕೊಠಡಿಗಳ ನಿರ್ಮಾಣಕ್ಕೆ ಅನುಮೋದನೆ ದೊರೆತಿದ್ದು, 90ಲಕ್ಷ ರೂ. ಮಂಜೂರಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಈಗಾಗಲೇ ಆಟದ ಮೈದಾನ ಮತ್ತು ಕಾಂಪೌಂಡ್ ನಿರ್ಮಿಸಲಾಗಿದೆ. ಕಲಿಕೆಗೆ ಪೂರಕವಾದ ಬೋಧನಾ ಸಲಕರಣೆಗಳನ್ನು ಒದಗಿಸಲಾಗಿದ್ದು, ಪ್ರಾಯೋಗಿಕ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು. ನಯೋಪ್ರಾ ಅಧ್ಯಕ್ಷ ಎಸ್.ರಾಘವೇಂದ್ರ ಶ್ರೇಷ್ಠಿ, ಮುಖಂಡರಾದ ಅಮಾತೆಪ್ಪ, ಬಸವರಾಜ ಕೋರಿ, ಶ್ರೀದೇವಿ ನಾಗರಾಜ, ನಾಗಪ್ಪ ಕತ್ತಿ, ವಿಶ್ವನಾಥ ಗಂಜಿಪೇಟೆ, ವಿವಿಧ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿದ್ದರು.
ಶುದ್ಧೀಕರಣ ಘಟಕಕ್ಕೆ ಚಾಲನೆ: ಜಯನಗರದಲ್ಲಿ ಕೆಕೆಆರ್‌ಡಿಬಿ ಮೈಕ್ರೋ ಯೋಜನೆಯಡಿ 10ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವ ಕುಡಿವ ನೀರಿನ ಶುದ್ಧೀಕರಣ ಘಟಕಕ್ಕೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು. ಜಿಪಂ ನಿರ್ವಹಣೆಯಲ್ಲಿ ಘಟಕ ನಿರ್ಮಿಸಿದ್ದು, ಸದ್ಭಳಕೆಗೆ ಸಲಹೆ ನೀಡಿದರು. ನಯೋಪ್ರಾ ಮಾಜಿ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ಮುಖಂಡರಾದ ರಂಗಾರೆಡ್ಡಿ, ಶೇಖರಗೌಡ ಕೆಳಗಿನಗೌಡ್ರು, ಅಮರೇಗೌಡ, ಎಸ್.ಜಿ.ಬಾಹುಬಲಿ, ಎಂ.ಸಿ.ಹಿರೇಮಠ, ಜಿ.ನೀಲಪ್ಪ, ಬಸವಪ್ರಭು, ವಿ.ಎಸ್. ಸೊಪ್ಪಿನಮಠ, ಮಲ್ಲಿಕಾರ್ಜುನ, ವಾಗೀಶ, ಶರಭಣ್ಣ, ಚನ್ನಬಸವ, ಶ್ರೀಧರ್ ಐಲಿ, ಮನೋಹರ, ಮೈಲಾರಪ್ಪ, ಶ್ರವಣ, ಪಂಪಣ್ಣ ಇತರರಿದ್ದರು.