ಸಣಾಪುರ-ಆನೆಗೊಂದಿ ಗ್ರಾಪಂ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿ ವೀಕ್ಷಿಸಿದ ಜಿಪಂ ಸಿಇಒ

21092022 gangavathi ceo visit
Published on

ಗಂಗಾವತಿ: ತಾಲೂಕಿನ ಸಣಾಪುರ ಮತ್ತು ಆನೆಗೊಂದಿ ಗ್ರಾಪಂ ವ್ಯಾಪ್ತಿಯಲ್ಲಿ ಜಿಪಂನಿಂದ ಕೈಗೆತ್ತಿಕೊಂಡ ವಿವಿಧ ಕಾಮಗಾರಿಗಳನ್ನು ಸಿಇಒ ಫೌಜಿಯಾ ತರನ್ನುಮ್ ನೇತೃತ್ವದ ಅಧಿಕಾರಿಗಳ ತಂಡ ಮಂಗಳವಾರ ಪರಿಶೀಲಿಸಿತು.

ತಿರುಮಲಾಪುರ, ಕರಿಯಪ್ಪ ಗಡ್ಡಿ, ಆನೆಗೊಂದಿ, ಬಸವನದುರ್ಗ, ಕೃಷ್ಣಾಪುರ ಡಗ್ಗಿಯಲ್ಲಿ ಜೆಜೆಎಂ, ಎಲ್‌ಡಬ್ಲುೃಯುಎಂ, ಸ್ವಚ್ಛ ಭಾರತ ಮಿಷನ್ ಗ್ರಾಮ ಯೋಜನೆ, ಬೂದು ನೀರು ನಿರ್ವಹಣೆ ಕಾಮಗಾರಿ ವೀಕ್ಷಿಸಿ, ನಿರ್ವಹಣೆ ಇಂಜಿನಿಯರ್‌ಗಳಿಂದ ಮಾಹಿತಿ ಪಡೆದರು. ಜೆಜೆಎಂ ಯೋಜನೆಯ ನಲ್ಲಿಗಳ ಪರೀಕ್ಷಿಸಿ, ಮನೆ ಮಾಲೀಕರೊಂದಿಗೆ ಕಾಮಗಾರಿ ಅಭಿಪ್ರಾಯ ಪಡೆದರು. ಬೂದು ನಿರ್ವಹಣೆ ಘಟಕದ ನೀರು ಸಂಗ್ರಹ ಕುರಿತಂತೆ ಇಂಜಿನಿಯರ್‌ಗಳೊಂದಿಗೆ ಚರ್ಚಿಸಿದರು.

ಸರ್ಕಾರಿ ಶಾಲೆಗೆ ಭೇಟಿ: ಕರಿಯಮ್ಮನ ಗಡ್ಡಿ ಸರ್ಕಾರಿ ಕಿಪ್ರಾ ಶಾಲೆಗೆ ಭೇಟಿ ನೀಡಿದ ಸಿಇಒ ಫೌಜಿಯಾ ತರನ್ನುಮ್, ಮಕ್ಕಳ ಪಠ್ಯ ವಿಷಯಗಳ ಕಲಿಕೆ ಗುಣಮಟ್ಟ ವಿಚಾರಿಸಿ ವಿದ್ಯಾರ್ಥಿಗಳೊಂದಿಗೆ ಸಮಾಲೋಚಿಸಿದರು. ಶಾಲೆಗೆ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ತಾಪಂ ಮತ್ತು ಗ್ರಾಪಂ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಕುಡಿವ ನೀರು ನೈರ್ಮಲ್ಯ ವಿಭಾಗದ ಇಇ ಬಸವನಗೌಡ, ತಾಪಂ ಇಒ ಮಹಾಂತಗೌಡ ಪಾಟೀಲ್, ಗ್ರಾಮೀಣ ನೀರು ಸರಬರಾಜು ಇಲಾಖೆ ಎಇಇ ಸತೀಶ್, ಇಂಜಿನಿಯರ್‌ಗಳಾದ ಚಿದಾನಂದ, ಸಿದ್ದಪ್ಪ, ಪಿಡಿಒ ಬಸವರಾಜಗೌಡ, ಕೃಷ್ಣಪ್ಪ, ತಾಲೂಕು ಐಇಸಿ ಸಂಯೋಜಕ ಸೋಮನಾಥನಾಯಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net