

ಗಂಗಾವತಿ: ಪರಿಸರ ಸಂರಕ್ಷಣೆಯತ್ತ ಅರಿವು ಮೂಡಿಸುವ ಸಾಹಿತ್ಯ ಹೊರಬರಬೇಕಿದ್ದು, ಮಾನವೀಯ ಮೌಲ್ಯ ಮತ್ತು ಸಂವೇದನಾಶೀಲ ಬರಹಕ್ಕೆ ಸರ್ವಕಾಲಿಕ ಮಾನ್ಯತೆ ದೊರೆಯಲಿದೆ ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ನಗರದ ಶ್ರೀ ಚನ್ನಬಸವಸ್ವಾಮಿ ಕಲಾಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸರ್ವೋದಯ ಮಂಡಳ ಜಿಲ್ಲಾ ಘಟಕ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವವಿಮರ್ಶೆ ಮತ್ತು ತರ್ಕಕ್ಕೊಳಗಾಗುವ ಸಾಹಿತ್ಯದತ್ತ ಗಮನಹರಿಸಬೇಕಿದ್ದು, ಮೌಢ್ಯತೆ ವಿರುದ್ಧ ಜಾಗೃತಿ ಮೂಡಿಸಬೇಕಿದೆ. ಮಹಿಳೆ ಒಂದು ಶಕ್ತಿ ಆದರೆ ಮೌಢ್ಯತೆಗೊಳಗಾಗುವ ವಿಶ್ಲೇಷಣೆ ನೀಡುವುದು ಸರಿಯಲ್ಲ. ಸಂಸ್ಕೃತಿ, ಸನ್ನಡತೆ, ಸಜ್ಜನಿಕೆ ರೂಪವೇ ಸೀಯಾಗಿದ್ದು, ಮಾನವೀಯ ಮೌಲ್ಯಗಳನ್ನೊಳಗೊಂಡ ಪ್ರೇರಕ ಶಕ್ತಿಯನ್ನಾಗಿ ಬಿಂಬಿಸಬೇಕಿದೆ ಎಂದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಸಮಾಜ ಪರಿವರ್ತನೆ ಸಾಮರ್ಥ್ಯ ಸಾಹಿತ್ಯಕ್ಕಿದ್ದು, ಸದಭಿರುಚಿಯ ಸಾಹಿತ್ಯ ಓದುವ ಹವ್ಯಾಸ ರೂಢಿಸಿಕೊಳ್ಳಬೇಕಿದೆ. ವಿಶ್ಲೇಷಣಾತ್ಮಕ ಸಾಹಿತ್ಯ ಕೃತಿಗಳು ಹೊರಬರಬೇಕಿದೆ ಎಂದರು.
ನಿವೃತ್ತ ಪ್ರಾಚಾರ್ಯ ಹಾಗೂ ಸರ್ವೋದಯ ಮಂಡಳ ಜಿಲ್ಲಾಧ್ಯಕ್ಷ ಡಾ.ಬಿ.ಸಿ.ಐಗೋಳರ ‘ಚಿಗುರೊಡೆಯುವ ಕಾಲ’ ಕವನ ಸಂಕಲನ ಮತ್ತು ಭಾವದ ಬೆಳಂದಿಗಳು ಹಾಡುಗಳ ಅಲ್ಬಂ ಬಿಡುಗಡೆಗೊಳಿಸಲಾಯಿತು.
ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ, ಸಾಹಿತಿ ನಿಜಲಿಂಗಪ್ಪ ಮೆಣಸಿಗೆ, ಸಂಗೀತ ನಿರ್ದೇಶಕ ಪ್ರಸನ್ನ ಶ್ರೀನಿವಾಸ ಮೂರ್ತಿ, ಧಾರವಾಡದ ಐಪಿಎ್ ಅಧ್ಯಕ್ಷ ಆರ್.ಎಂ.ದರಗದ್, ಬೇತೆಲ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ರಾಜುಸುಧಾಕರ ದಯಾಶೀಲ, ಮಂಡಳ ಗೌರವಾಧ್ಯಕ್ಷ ಡಾ.ಕೆ.ಬಿ.ಬ್ಯಾಳಿ, ಸಂಚಾಲಕ ಡಾ.ಶರಣಬಸಪ್ಪ ಕೋಲ್ಕಾರ್ ಇತರರಿದ್ದರು.