ಸುರಕ್ಷತಾ ಸಲಕರಣೆ ಬಳಕೆ ಅವಶ್ಯ

Training Workshop
ಗಂಗಾವತಿ ವಿರುಪಾಪುರ ತಾಂಡಾದಲ್ಲಿ ಕಾರ್ಮಿಕರ ಸುರಕ್ಷತಾ ಸಲಕರಣೆ ಬಳಕೆ ಕುರಿತು ಕಾರ್ಯಾಗಾರ ನಡೆಯಿತು. ತರಬೇತಿ ಸಂಚಾಲಕರಾದ ಸಮೀರ್, ಇಜಾಜ್, ಶ್ರೀ ಸೇವಾಲಾಲ್ ಕಾರ್ಮಿಕರ ಸಂಘದ ಅಧ್ಯಕ್ಷ ಪಾಂಡುನಾಯ್ಕ ಇತರರಿದ್ದರು.
Published on

ಗಂಗಾವತಿ: ಸುರಕ್ಷತಾ ಸಲಕರಣೆ ಬಳಕೆ ಕುರಿತು ಕಾರ್ಮಿಕ ಇಲಾಖೆಯಿಂದ ನೋಂದಾಯಿತ ಕಾರ್ಮಿಕರಿಗೆ ತರಬೇತಿ ಕಾರ್ಯಾಗಾರ ನಗರದ ವಿರುಪಾಪುರ ತಾಂಡಾದ ಶ್ರೀ ಸೇವಾಲಾಲ್ ದೇವಾಲಯ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸುರಕ್ಷತಾ ಸಲಕರಣೆಗಳನ್ನು ಕಡ್ಡಾಯ ಬಳಕೆ ಮಾಡಿಕೊಳ್ಳುವ ಮೂಲಕ ಜೀವ ರಕ್ಷಿಸಿಕೊಳ್ಳುವಂತೆ ಸಲಹೆ ನೀಡಲಾಯಿತು.

ಶ್ರೀ ಸೇವಾಲಾಲ್ ಕಾರ್ಮಿಕರ ಸಂಘದ ಅಧ್ಯಕ್ಷ ಪಾಂಡುನಾಯ್ಕ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಯೋಜನೆಗಳ ಮಾಹಿತಿ ಜತೆಗೆ ಸುರಕ್ಷತಾ ಸಲಕರಣೆಗಳ ಬಳಕೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಇಲಾಖೆ ಯೋಜನೆಗಳನ್ನು ನೋಂದಾಯಿತ ಕಾರ್ಮಿಕರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಘಟನೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದರು.

ತರಬೇತಿ ಸಂಚಾಲಕರಾದ ಸಮೀರ್ ಮತ್ತು ಇಜಾಜ್ ಸುರಕ್ಷಾ ಸಲಕರಣೆ ಬಳಕೆ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಾಮಾನಾಯ್ಕ, ಎಪಿಎಂಸಿ ಮಾಜಿ ಸದಸ್ಯ ತಿಪ್ಪಣ್ಣ, ನಿವೃತ್ತ ಕಂದಾಯ ಅಧಿಕಾರಿ ಎಸ್.ವಿ. ಗೋಪಾಲಕೃಷ್ಣ, ಸಂಘಟನೆ ಪದಾಧಿಕಾರಿಗಳಾದ ಬಾಲಾಜಿ, ಹನುಮಂತಪ್ಪ, ಕೃಷ್ಣ, ರವಿಚಂದ್ರ, ವೆಂಕಟೇಶ, ದಾವಲಸಾಬ್, ಶಿವಪ್ಪ, ಲೋಕೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net