8ನೇ ದಿನದ ಸದ್ಭಾವನಾ ಪಾದಯಾತ್ರೆ ಸಂಪನ್ನ

Sadbhavana Padayatra
ಗಂಗಾವತಿ 13ನೇ ವಾರ್ಡ್ ವಿವಿಧ ಕಾಲನಿಗಳಲ್ಲಿ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಸದ್ಭಾವನಾ ಪಾದಯಾತ್ರೆ ಗುರುವಾರ ಜರುಗಿತು. ಸಮಿತಿ ಸಂಚಾಲಕರಾದ ಶಿವಲಿಂಗ ದೇವರು, ಹಾನಗಲ್‌ನ ಚಂದ್ರಶೇಖರ್ ಸ್ವಾಮೀಜಿ, ಮುಖಂಡರಾದ ಸಂಗಯ್ಯಸ್ವಾಮಿ ಸಂಶಿಮಠ, ದುರುಗೇಶ ದೊಡ್ಡಮನಿ, ಶರಣಪ್ಪ ಹುಡೇಜಾಲಿ ಇತರರಿದ್ದರು.
Published on

ಗಂಗಾವತಿ: ಲಿಂ.ಹಾನಗಲ್ ಕುಮಾರ ಶಿವಯೋಗಿಗಳ 158ನೇ ಜಯಂತ್ಯುತ್ಸವ ನಿಮಿತ್ತ ನಗರದ 13ನೇ ವಾರ್ಡ್ ವಿವಿಧ ಕಾಲನಿಗಳಲ್ಲಿ ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಸದ್ಭಾವನಾ ಪಾದಯಾತ್ರೆ ಹಮ್ಮಿಕೊಂಡಿದ್ದು, ಸ್ಥಳೀಯರು ರಸ್ತೆಯುದ್ದಕ್ಕೂ ಪುಷ್ಪಾರ್ಪಣೆ ಮೂಲಕ ಯಾತ್ರೆಯನ್ನು ಗುರುವಾರ ಸ್ವಾಗತಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಶ್ರೀ ಕುಮಾರೇಶ್ವರ ಜಯಂತಿ ಮಹೋತ್ಸವ ಸಮಿತಿಯಿಂದ ಯಾತ್ರೆ ನಡೆಯುತ್ತಿದ್ದು, 8ನೇ ದಿನದ ಯಾತ್ರೆ ನಗರದ ಶರಣಬಸವೇಶ್ವರ ಕ್ಯಾಂಪ್, ಆಶ್ರಯ ಕಾಲನಿಗಳಲ್ಲಿ ಸಂಚರಿಸಿತು. ನಂತರ ಕ್ಯಾಂಪ್‌ನ ಶರಣಬಸವೇಶ್ವರ ದೇವಾಲಯದಲ್ಲಿ ಧರ್ಮ ಸಭೆ ನಡೆಯಿತು. ವಿವಿಧ ಸಮಾಜದ ಮುಖಂಡರು ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಲಾಯಿತು.

ಜಯಂತ್ಯುತ್ಸವ ಸಮಿತಿ ಸಂಚಾಲಕರಾದ ಶಿವಲಿಂಗ ದೇವರು, ಹಾನಗಲ್‌ನ ಚಂದ್ರಶೇಖರ್ ಸ್ವಾಮೀಜಿ, ಪದಾಧಿಕಾರಿಗಳಾದ ಎಚ್.ಎಸ್.ಗಿರೇಗೌಡ, ಮುಖಂಡರಾದ ಸಂಗಯ್ಯಸ್ವಾಮಿ ಸಂಶಿಮಠ, ದುರುಗೇಶ ದೊಡ್ಡಮನಿ, ಶರಣಬಸವ, ಶರಣಪ್ಪ ಹುಡೇಜಾಲಿ ಹಾಗೂ ಭಜನಾ ಮಂಡಳಿ ಸದಸ್ಯರಿದ್ದರು.

ಹೇರೂರಿನಲ್ಲಿ ಸದ್ಭಾವನಾ ಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಿದ್ದು, ಭಜನಾಮಂಡಳಿ ಮತ್ತು ಕೋಲಾಟ ತಂಡಗಳು ಭಾಗವಹಿಸಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net