ನ.1ರಂದು ಆರ್‌ಎಸ್‌ಎಸ್ ಪಥಸಂಚಲನ

gvt-1
ಗಂಗಾವತಿ ವಿವೇಕ ಭಾರತಿ ಪ್ರೌಢ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಮ್ರಾಜ್ಯ ಸಾಂಕ ವಿಶೇಷ ಕಾರ್ಯಕ್ರಮದಲ್ಲಿ ಮಕ್ಕಳ ವೀರ ಪರಾಕ್ರಮಿಗಳ ವೇಷಭೂಷಣ ಗಮನಸೆಳೆಯಿತು. ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ನಗರಸಭೆ ಮಾಜಿ ಸದಸ್ಯ ಬಿ.ಅಶೋಕ, ಮುಖಂಡ ಚಂದ್ರಕಾಂತ ಇನ್ನಿತರರಿದ್ದರು.
Published on

ಗಂಗಾವತಿ: ನಗರದ ವಿವೇಕ ಭಾರತಿ ಪ್ರೌಢ ಶಾಲೆ ಆವರಣದಲ್ಲಿ ಸ್ಥಳೀಯ ಶಾಖೆಯಿಂದ ಆರ್‌ಎಸ್‌ಎಸ್ ಸಂಸ್ಥಾಪನೆ ಶತಾಬ್ದಿ ಹಿನ್ನೆಲೆಯಲ್ಲಿ ಸಾಮ್ರಾಜ್ಯ ಸಾಂಕ ವಿಶೇಷ ಕಾರ್ಯಕ್ರಮ ಭಾನುವಾರ ನಡೆಯಿತು.

12 ಸಾಮ್ರಾಜ್ಯಗಳ ಹೆಸರಿನಲ್ಲಿ ತಂಡಗಳನ್ನು ರಚಿಸಿ ದೇಶಿ ಆಟ ಮತ್ತು ಸಾಮರ್ಥ್ಯ ಪ್ರದರ್ಶನ ನಡೆಯಿತು. ನ.1ರಂದು ನಗರದಲ್ಲಿ ಆಯೋಜಿಸಿರುವ ಪಥ ಸಂಚಲನದ ಹಿನ್ನೆಲೆಯಲ್ಲಿ ಸಾಂಕ ಜರುಗಿದ್ದು, ವಿದ್ಯಾರ್ಥಿಗಳು ಮತ್ತು ಯುವಕರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಭಾರತ ಮಾತೆಗೆ ಪುಷ್ಪಾರ್ಪಣೆ ಸಲ್ಲಿಸಿದ ನಂತರ, ಧ್ವಜವಂದನೆ ನೆರವೇರಿಸಲಾಯಿತು. ಆರ್‌ಎಸ್‌ಎಸ್ ಬೆಳವಣಿಗೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳ ಕುರಿತು ಗಣ್ಯರು ಅಭಿಪ್ರಾಯ ಹಂಚಿಕೊಂಡರು. ಮಕ್ಕಳು ಪ್ರಸ್ತುತಪಡಿಸಿದ ವೀರ ಪರಾಕ್ರಮಿಗಳ ವೇಷಭೂಷಣ ಮೆರುಗು ನೀಡಿತು. ನಂತರ ಆಟೋಟಗಳನ್ನು ಆಯೋಜಿಸಲಾಗಿತ್ತು.

ಆರ್‌ಎಸ್‌ಎಸ್ ಪ್ರಮುಖರಾದ ಹೊಸಪೇಟೆಯ ಕೇಶವ, ಕೊಪ್ಪಳದ ಬಸವರಾಜ ಡಂಬಳ, ಸಂದೀಪ ಮುತ್ತಗೆ, ಸೋಮಶೇಖರ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ನಗರಸಭೆ ಸದಸ್ಯ ವಾಸುದೇವ ನವಲಿ, ಮಾಜಿ ಸದಸ್ಯ ಬಿ.ಅಶೋಕ, ಮುಖಂಡರಾದ ಚಂದ್ರಕಾಂತ, ವೀರೇಶ ಗುಡೂರು, ಅಯ್ಯನಗೌಡ, ಮೌನೇಶ ಬಡಿಗೇರ್, ಬದರಿ ನಾರಾಯಣ, ಶ್ರವಣಕುಮಾರ ರಾಯ್ಕರ್, ಅಶೋಕ ರಾಯ್ಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net