21, 22 ರಂದು ಬೀಳಗಿಯಲ್ಲಿ ಗಂಗಾವತಿ ರೇಷ್ಮಾ ರಂಗೋತ್ಸವ

Gangavati Reshma Rangotsava at Belagi on 21st and 22nd
ಡಾ. ಯಶವಂತ ಸರದೇಶಪಾಂಡೆ
Published on

ಬೀಳಗಿ: ಹುಬ್ಬಳ್ಳಿಯ ಗುರು ಇನ್ಸ್‌ಟಿಟ್ಯೂಟ್ ತಂಡದ ‘ಸೂಪರ್ ಸಂಸಾರ’ ಮತ್ತು ‘ಸಹಿ ರೀ ಸಹಿ’ ಎಂಬ ಎರಡು ಹೊಸ ಹಾಸ್ಯ ನಾಟಕಗಳ ಪ್ರದರ್ಶನ ಸೆ. 21, 22 ರಂದು ಸ್ಥಳೀಯ ಶ್ರೀ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಪದವಿ ಪೂರ್ವ ವಿದ್ಯಾಲಯದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಡಾ. ಯಶವಂತ ಸರದೇಶಪಾಂಡೆ ತಿಳಿಸಿದ್ದಾರೆ.

ಗಂಗಾವತಿ ರೇಷ್ಮಾ ರಂಗೋತ್ಸವ ಎಂಬ ಎರಡು ದಿನಗಳ ಈ ನಾಟಕ ಹಬ್ಬವನ್ನು ಬೀಳಗಿಯ ಶ್ರೀ ಸಿದ್ಧೇಶ್ವರ ವಿದ್ಯಾವರ್ಧಕ ಸಂಘದ ಪದವಿ ಪೂರ್ವ ವಿದ್ಯಾಲಯ 1983-84ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚಿನ ವಿದ್ಯಾರ್ಥಿಗಳು ಆಯೋಜಿಸಿದ್ದಾರೆ. ಗಂಗಾವತಿ ರೇಷ್ಮಾ ಅವರನ್ನು ಸನ್ಮಾನಿಸಲಾಗುವುದು. ಮರಾಠಿಯ ಖ್ಯಾತ ನಾಟಕಕಾರ ಸಂತೋಷ ಪವಾರ ಅವರ ‘ಸೂಪರ್ ಸಂಸಾರ’ ಮತ್ತು ಕೇದಾರ ಶಿಂಧೆ ರಚಿಸಿದ ‘ಸಹಿ ರೀ ಸಹಿ’ ನಾಟಕಗಳನ್ನು ಡಾ ಯಶವಂತ ಸರದೇಶಪಾಂಡೆ ಕನ್ನಡಕ್ಕೆ ಅನುವಾದಿಸಿ, ನಿರ್ದೇಶಿಸಿದ್ದಾರಲ್ಲದೆ, ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆಲ್ ದಿ ಬೆಸ್ಟ್, ರಾಶಿಚಕ್ರ, ಹಿಂಗಾದ್ರ, ಕಾಮಿಡಿ, ಒಂದಾಟ ಭಟ್ಟರದು ಸೇರಿ ಹಲವು ನಗೆ ನಾಟಕಗಳನ್ನು ನಾಡಿನಾದ್ಯಂತ ಮತ್ತು ಹೊರದೇಶದಲ್ಲಿ ಸೇರಿ 6000ಕ್ಕೂ ಹೆಚ್ಚು ಪ್ರದರ್ಶನ ನೀಡಿದ ಹೆಮ್ಮೆ ಈ ತಂಡದ್ದಾಗಿದೆ. ನಾಟಕದ ಕೊನೆಗೆ ಅದೃಷ್ಟವಂತ ಪ್ರೇಕ್ಷಕರಿಗೆ ಸಾವಿರಾರು ರೂ. ಬೆಲೆಯ ಸಿಲ್ಕ್ ಸೀರೆ ಉಡುಗೊರೆಯಾಗಿ ನೀಡಲಾಗುವುದು. ಹುಬ್ಬಳ್ಳಿಯ ಗಂಗಾವತಿ ಸಿಲ್ಕ್ ಪ್ಯಾಲೇಸಿನ ಪ್ರಾಯೋಜಿಕತ್ವದಲ್ಲಿ ನಡೆಯುತ್ತಿರುವ ನಾಟಕ ಪ್ರದರ್ಶನಗಳ ನಂತರ ಪ್ರೇಕ್ಷಕರಿಗೆ ಸಹಭೋಜನವಿರುತ್ತದೆ. ಆಹ್ವಾನ ಪತ್ರವಿರುವ ಪ್ರೇಕ್ಷಕನಿಗೆ ಮಾತ್ರ ಪ್ರವೇಶವಿರುತ್ತದೆ. ಆಸಕ್ತರು, ಬೀಳಗಿಯ ಸಂಯೋಜನಾ ಸಹಾಯಕ ಕಿಯೋನಿಕ್ಸ್ ಯುವ, ಕಾಂ ಬೀಳಗಿ (9902465889 944889492, 9448640336, 8497005791) ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.

ಎಸ್.ಬಿ. ಪಾಟೀಲ, ಲಿಂಗರಾಜ ವೈದ್ಯ ಡಾ. ಪ್ರಮೋದ ದೇಶಪಾಂಡೆ, ಶಿವಾನಂದ ಶಿರೋಳ, ಸಿದ್ದು ಬಾಗಶೆಟ್ಟಿ, ಈರಣ್ಣ ನಾಗರಾಳ, ರಾಜು ಗೋಕಾಕ, ವೆಂಕಟೇಶ ಪಾಟೀಲ, ಎಚ್.ವಿ. ಲಿಂಗಣ್ಣವರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net