ಕಲ್ಲಡ್ಕ ಪ್ರಭಾಕರ ಭಟ್ ಬಂಧಿಸಿ

AREST
ಧಾರ್ಮಿಕ ಮುಖಂಡ ಕಲ್ಲಡ್ಕ ಪ್ರಭಾಕರ ಬಂಧನಕ್ಕೆ ಒತ್ತಾಯಿಸಿ ಜೆಡಿಎಸ್ ತಾಲೂಕು ಘಟಕದ ಪದಾಧಿಕಾರಿಗಳು ಗಂಗಾವತಿಯಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ತಾಲೂಕಾಧ್ಯಕ್ಷ ಶೇಖ್ ನಬೀಸಾಬ್, ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ, ಪದಾಧಿಕಾರಿಗಳಾದ ಅಯೂಬ್, ಲುಬೀನಾ, ಶಾಮೀದಾಬೇಗಂ, ಅಮೀನಾಬೇಗಂ ಇತರರಿದ್ದರು.
Published on

ಗಂಗಾವತಿ: ಧಾರ್ಮಿಕ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಬಂಧನಕ್ಕೆ ಒತ್ತಾಯಿಸಿ ಜೆಡಿಎಸ್ ತಾಲೂಕು ಘಟಕದ ಪದಾಧಿಕಾರಿಗಳು ನಗರದ ಅಂಬೇಡ್ಕರ್ ವೃತ್ತದಿಂದ ಶ್ರೀಕೃಷ್ಣ ದೇವರಾಯ ವೃತ್ತದವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡಗೌಡರ್‌ಗೆ ಮಂಗಳವಾರ ಮನವಿ ಸಲ್ಲಿಸಿದರು.

ಘಟಕದ ಅಧ್ಯಕ್ಷ ಶೇಖ್ ನಬೀಸಾಬ್ ಮಾತನಾಡಿ, ಮುಸ್ಲಿಂ ಮಹಿಳೆಯರನ್ನು ನಿಂದಿಸಿದ ಕಲ್ಲಡ್ಕ ಪ್ರಭಾಕರ ರಾಜ್ಯದಲ್ಲಿರಲು ಅರ್ಹರಲ್ಲ. ಕೋಮುಸೌಹಾರ್ದತೆಗೆ ಧಕ್ಕೆ ತರುವ ವ್ಯಕ್ತಿಗಳ ವಿರುದ್ಧ ಸರ್ಕಾರವೇ ಸ್ವಯಂ ಪ್ರಕರಣ ದಾಖಲಿಸಬೇಕಿದ್ದು, ರಾಜ್ಯದಿಂದ ಗಡಿಪಾರು ಮಾಡಬೇಕು. ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಹೇಳಿಕೆ ನೀಡುವ ಪ್ರಭಾಕರ ಭಟ್‌ರನ್ನು ಕೂಡಲೇ ಬಂಧಿಸಬೇಕಿದ್ದು, ನಿರ್ಲಕ್ಷಿಸಿದರೆ ಜಿಲ್ಲಾಡಳಿತದ ಮುಂದೆ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದರು.

ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ, ಪದಾಧಿಕಾರಿಗಳಾದ ಅಯೂಬ್ ಸಗರಿ, ಎ.ಎಸ್. ತಾರೀಕ್ ಪಟೇಲ್, ಮಹ್ಮದ್ ಯೂಸ್ೂ, ತಾಜುದ್ದೀನ್, ಲುಬೀನಾ, ಶಾಮೀದಾಬೇಗಂ, ಅಮೀನಾಬೇಗಂ, ನೂರ್‌ಮಹ್ಮದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net