ಗುರುಸಾರ್ವಭೌಮರ ಮಧ್ಯಾರಾಧನೆ ಸಂಭ್ರಮ

24082021 Gangavathi rayara aaradhane
Published on


ಗಂಗಾವತಿ: ನಗರದ ರಾಯರ ಮಠದಲ್ಲಿ ಗುರುಸಾರ್ವಭೌಮ ಶ್ರೀ ರಾಘವೇಂದ್ರ ಸ್ವಾಮಿಗಳ 350ನೇ ಆರಾಧನಾ ಮಹೋತ್ಸವ ನಿಮಿತ್ತ ಮಂಗಳವಾರ ಮಧ್ಯಾರಾಧನೆ ವಿಜೃಂಭಣೆಯಿಂದ ನಡೆಯಿತು.

ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸುಪ್ರಭಾತ, ಮೃತ್ತಿಕಾ ವೃಂದಾವನಕ್ಕೆ ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ಪಾರಾಯಣದೊಂದಿಗೆ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಪಾದಪೂಜೆಯೊಂದಿಗೆ ಕನಕಾಭಿಷೇಕ ಅರ್ಚನೆ, ಹಸ್ತೋದಕ ಮತ್ತು ಮಹಾಮಂಗಳಾರತಿ ನಡೆದವು. ಶ್ರೀವಿಜಯವಿಠ್ಠಲ ಮಹಿಳಾ ಭಜನಾ ಮಂಡಳಿಯಿಂದ ಹರಿಕಥಾಮೃತಾಸಾರ ಪಾರಾಯಣ ಹಮ್ಮಿಕೊಳ್ಳಲಾಗಿತ್ತು. ಮಠದ ವ್ಯವಸ್ಥಾಪಕ ಜಿ.ಸುರೇಶ, ವಿಚಾರಣಕರ್ತ ರಾಮಕೃಷ್ಣ ಜಹಾಗೀರದಾರ್, ಅರ್ಚಕ ಪ್ರಹ್ಲಾದಾಚಾರ್ ಕಟ್ಟಿ, ವಿಪ್ರ ಸಮುದಾಯದ ಮುಖಂಡರಾದ ದಿಗ್ಗಾವಿ ಹನುಮೇಶಾಚಾರ್, ಹನುಮಂತರಾವ್, ಶ್ಯಾಮಾಚಾರ್ ಜೋಶಿ, ಕೋಪ್ರೇಶ ಜೋಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net