ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಿ; ಗಂಗಾವತಿಯಲ್ಲಿ ಎಸ್‌ಎ್ಐ ತಾಲೂಕು ಸಮಿತಿ ಪ್ರತಿಭಟನೆ

02092022 gangavathi students protest
Published on

ಗಂಗಾವತಿ: ದಲಿತರ ಮೇಲಿನ ಹಲ್ಲೆ ಮತ್ತು ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಎಸ್‌ಎಫ್ಐ ತಾಲೂಕು ಸಮಿತಿ ಶುಕ್ರವಾರ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಮಂಜುನಾಥ ನಂದನ್‌ಗೆ ಮನವಿ ಸಲ್ಲಿಸಿತು.

ಸಮಿತಿಯ ತಾಲೂಕು ಅಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ಬಿಲ್ಕಿಸ್ ಬಾನು ಪ್ರಕರಣದ ಅಪರಾಧಿಗಳನ್ನು ಬಿಡುಗಡೆ ಮಾಡಿರುವುದು ಖಂಡನೀಯ. ರಾಜಸ್ಥಾನದಲ್ಲಿ ದಲಿತ ಬಾಲಕನನ್ನು ಕೊಂದ ಶಿಕ್ಷಕನಿಗೆ ಕಠಿಣ ಶಿಕ್ಷೆಯಾಗಬೇಕು. ಹಲ್ಲೆ, ಅತ್ಯಾಚಾರ ಪ್ರಕರಣ ನಿಯಂತ್ರಿಸುವಲ್ಲಿ ಬಿಜೆಪಿ ಸರ್ಕಾರ ವಿಲವಾಗಿದೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿಯರು ಮತ್ತು ಪಾಲಕರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷ ಅಮರೇಶ ಕಡಗದ್, ಪದಾಧಿಕಾರಿಗಳಾದ ಶಿವಕುಮಾರ ಈಚನಾಳ್, ಸೋಮನಾಥ, ನಾಗರಾಜ್, ವಿಜಯಲಕ್ಷ್ಮೀ, ಶರಣಮ್ಮ, ಸವಿತಾ, ಚೈತ್ರಾ, ದುರುಗಮ್ಮ, ಭೀಮಾಂಬಿಕಾ, ಶಾಂತಾ, ತ್ರಿವೇಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net