ಪೊಲೀಸರ ನಡೆಗೆ ವಕೀಲರ ಖಂಡನೆ

PROTEST
ರಾಮನಗರ ಜಿಲ್ಲೆಯ ವಕೀಲರ ಮೇಲೆ ಸುಳ್ಳು ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗಂಗಾವತಿಯಲ್ಲಿ ತಾಲೂಕು ವಕೀಲರ ಸಂಘದ ಸದಸ್ಯರು ಮಂಗಳವಾರ ಪ್ರತಿಭಟನೆ ನಡೆಸಿದರು. ಸಂಘದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ಹಿರಿಯ ಸದಸ್ಯರಾದ ಸೋಮನಾಥ ಪಟ್ಟಣಶೆಟ್ಟಿ, ಸಿದ್ದನಗೌಡ ಇತರರಿದ್ದರು.
Published on

ಗಂಗಾವತಿ: ರಾಮನಗರ ಜಿಲ್ಲೆಯ ವಕೀಲರ ಮೇಲೆ ಸುಳ್ಳು ಪ್ರಕರಣ ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ತಾಲೂಕು ವಕೀಲರ ಸಂಘದ ಸದಸ್ಯರು ನಗರದ ವಕೀಲರ ಸಂಘದ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಕಚೇರಿಯಲ್ಲಿ ತುರ್ತು ಸಭೆ ಕರೆದಿದ್ದ ಸಂಘದ ಸದಸ್ಯರು, ಶ್ರೀರಾಮನಗರ ಜಿಲ್ಲೆ ಐಜೂರು ಠಾಣೆಯ ಅಧಿಕಾರಿಗಳ ಸರ್ವಾಧಿಕಾರ ಧೋರಣೆ ಖಂಡಿಸಿದರು. ಸಂಘದ ಕಾರ್ಯದರ್ಶಿ ಎಚ್.ಎಂ.ಮಂಜುನಾಥ ಮಾತನಾಡಿ, ಶ್ರೀರಾಮನಗರ ಜಿಲ್ಲೆಯ 40 ವಕೀಲರ ವಿರುದ್ಧ ವಿನಾಕಾರಣ ದೂರು ದಾಖಲಿಸಿಕೊಂಡಿರುವುದು ಖಂಡನೀಯ. ಪೊಲೀಸ್ ಅಧಿಕಾರಿಗಳು ಮಾಡಿರುವುದು ತಪ್ಪೆಂದು ಗೊತ್ತಿದ್ದರೂ ಇದುವರೆಗೂ ಕ್ರಮವಾಗಿಲ್ಲ.

ಇತ್ತೀಚೆಗೆ ವಕೀಲರ ಮೇಲೆ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ನ್ಯಾಯಕ್ಕಾಗಿ ಶ್ರಮಿಸುವ ವಕೀಲರಿಗೂ ನ್ಯಾಯ ದೊರೆಯುತ್ತಿಲ್ಲ. ಶ್ರೀರಾಮನಗರ ಪ್ರಕರಣ ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಪ್ಪಿಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸಂಘದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಹಿರಿಯ ಸದಸ್ಯರಾದ ಸೋಮನಾಥ ಪಟ್ಟಣಶೆಟ್ಟಿ, ಸಿದ್ದನಗೌಡ, ಬಸವನಗೌಡ, ಶರದ್ ದಂಡಿನ್, ಟಿ.ಮಂಜುನಾಥ, ಸಂತೋಷ ಬಳಂಕರ್, ಹನುಮೇಶ ಕುಂಬಾರ, ಪ್ರಕಾಶ ಕುಸಬಿ, ನವಲಿ ಪ್ರಲ್ಹಾದರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net