ರೈಲು ಸಂಚಾರದ ಸಮಯ- ಮಾರ್ಗ ಬದಲಿಸಿ

Gangavathi Rotary club mebers appel
ರೈಲ್ವೆ ಯೋಜನೆಗಳ ವಿಸ್ತಾರ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಅವರಿಗೆ ಕೊಪ್ಪಳದ ನಿವಾಸದಲ್ಲಿ ರೋಟರಿ ಕ್ಲಬ್ ಗಂಗಾವತಿ ತಾಲೂಕು ಸಮಿತಿ ಸದಸ್ಯರು ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಟಿ.ಆಂಜನೇಯ, ಕಾರ್ಯದರ್ಶಿ ವಾಸುಕೊಳಗದ್, ಸಹಾಯಕ ಪಾಲಕ ಮಹೇಶ ಸಾಗರ, ಜನಾದ್ರಿ ದೊಡ್ಡಯ್ಯ, ಎ. ಶಿವಕುಮಾರ, ಎಚ್.ಎಂ.ಮಂಜುನಾಥ ಇತರರಿದ್ದರು.
Published on

ಕೊಪ್ಪಳ ಸಂಸದಗೆ ರೋಟರಿ ಕ್ಲಬ್ ಗಂಗಾವತಿ ತಾಲೂಕು ಸಮಿತಿ ಮನವಿ | ‰ ಟೋಲ್ ಗೇಟ್ ಶುಲ್ಕ ಸಮಸ್ಯೆ ಪರಿಹರಿಸಿ

ಗಂಗಾವತಿ: ರೈಲ್ವೆ ಯೋಜನೆಗಳ ವಿಸ್ತಾರ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಂಸದ ಕೆ.ರಾಜಶೇಖರ್ ಹಿಟ್ನಾಳ್ ಅವರಿಗೆ ರೋಟರಿ ಕ್ಲಬ್ ತಾಲೂಕು ಸಮಿತಿ ಸದಸ್ಯರು ಶನಿವಾರ ಮನವಿ ಸಲ್ಲಿಸಿದರು.

ಸಂಸದರ ಕೊಪ್ಪಳ ನಿವಾಸಕ್ಕೆ ತೆರಳಿದ ಸಮಿತಿ ಸದಸ್ಯರು ಕ್ಷೇತ್ರ ವ್ಯಾಪ್ತಿಯಲ್ಲಾಗಬೇಕಿರುವ ರೈಲ್ವೆ ಯೋಜನೆ ಮತ್ತು ಇತರೆ ವಿಷಯಗಳ ಕುರಿತು ಚರ್ಚಿಸಿದರು. ಸಮಿತಿ ತಾಲೂಕು ಅಧ್ಯಕ್ಷ ಟಿ.ಆಂಜನೇಯ ಮಾತನಾಡಿ, ಗಂಗಾವತಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮೂಲ ಸೌಕರ್ಯ ಒದಗಿಸಬೇಕಿದ್ದು, ಬೆಂಗಳೂರು ಸಂಚಾರದ ಸಮಯ ಮತ್ತು ಮಾರ್ಗ ಬದಲಾವಣೆಗೆ ಆದ್ಯತೆ ನೀಡಬೇಕು. ದರೋಜಿ, ಬಾಗಲಕೋಟೆ ನೂತನ ಮಾರ್ಗ, ಹಲವು ರೈಲ್ವೆ ಮಾರ್ಗಗಳ ವಿಸ್ತರಣೆ, ರೈಲ್ವೆ ನಿಲ್ದಾಣಕ್ಕೆ ಕಿಷ್ಕಿಂದಾ ಅಥವಾ ಅಂಜನಾದ್ರಿ ನಾಮಕರಣ, ನೂತನ ಗಂಗಾವತಿ ಜಿಲ್ಲಾ ರಚನೆ, ವಿಮಾನ ನಿಲ್ದಾಣ, ಟೋಲ್ ಗೇಟ್ ಶುಲ್ಕ ಸಮಸ್ಯೆ ಬಗೆಹರಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿದರು.

ಕಾರ್ಯದರ್ಶಿ ವಾಸುಕೊಳಗದ್, ಸಹಾಯಕ ಪಾಲಕ ಮಹೇಶ ಸಾಗರ, ಜೆ. ನಾಗರಾಜ , ಸಲಾಹುದ್ದೀನ್ ಸುರಪುರ, ಜನಾದ್ರಿ ದೊಡ್ಡಯ್ಯ, ಸಿ.ಎಚ್.ಶ್ರೀನಿವಾಸ, ಎ. ಶಿವಕುಮಾರ, ಎಚ್.ಎಂ.ಮಂಜುನಾಥ, ದಿಲೀಪ ಮೂಥಾ, ಮಂಜುನಾಥ ಹುಡೇದ್ ಇತರರಿದ್ದರು. ಸಂಸದ ರಾಜಶೇಖರ್ ಹಿಟ್ನಾಳ್ ಮಾತನಾಡಿ, ಬಜೆಟ್ ಅಧಿವೇಶನದಲ್ಲಿ ರೈಲ್ವೆ ಸಚಿವರೊಂದಿಗೆ ಚರ್ಚಿಸಲಾಗುತ್ತಿದ್ದು, ರೈಲ್ವೆ ಯೋಜನೆಗಳ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net