ತಳಿಗಳ ಪ್ರದರ್ಶನ-ಮಾರಾಟ ಆಯೋಜನೆ

UDGHATANE
ಗಂಗಾವತಿಯಲ್ಲಿ ಹಮ್ಮಿಕೊಂಡಿದ್ದ ಹಿಂಗಾರು ಹಂಗಾಮಿನ ಬೀಜ ದಿನೋತ್ಸವ ಮತ್ತು ತಾಂತ್ರಿಕತೆ ಕುರಿತ ತರಬೇತಿ ಕಾರ್ಯಾಗಾರವನ್ನು ರಾಯಚೂರು ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ತಿಮ್ಮಪ್ಪ ಚವಡಿ ಸೋಮವಾರ ಉದ್ಘಾಟಿಸಿದರು. ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್, ಸರ್ಕಾರಿ ಕೃಷಿ ಕಾಲೇಜು ಪ್ರಭಾರ ವಿಶೇಷಾಧಿಕಾರಿ ಡಾ.ಮಹಾಂತ ಶಿವಯೋಗಯ್ಯ ಇತರರಿದ್ದರು.
Published on

ಗಂಗಾವತಿ: ಗುಣಮಟ್ಟದ ಬೀಜಗಳ ಬಳಕೆ ಮೂಲಕ ಉತ್ತಮ ಇಳುವರಿ ಪಡೆಯಬಹುದಾಗಿದ್ದು, ಬೀಜೋಪಾಚಾರಕ್ಕೆ ಆದ್ಯತೆ ನೀಡುವಂತೆ ರಾಯಚೂರು ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ತಿಮ್ಮಪ್ಪ ಚವಡಿ ಹೇಳಿದರು.

ನಗರದ ಕೃಷಿ ಸಂಶೋಧನಾ ಕೇಂದ್ರದ ಸಭಾಂಗಣದಲ್ಲಿ ಕೃಷಿ ವಿವಿ ಮತ್ತು ಕೃಷಿ ವಿಜ್ಞಾನ ಕೇಂದ್ರದಿಂದ ಸೋಮವಾರ ಹಮ್ಮಿಕೊಂಡಿದ್ದ ಹಿಂಗಾರು ಹಂಗಾಮಿನ ಬೀಜ ದಿನೋತ್ಸವ ಮತ್ತು ತಾಂತ್ರಿಕತೆ ಕುರಿತ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರಾಯಚೂರ ಕೃಷಿ ವಿವಿಯಲ್ಲಿ ಬೀಜದಿನೋತ್ಸವ ಜತೆಗೆ ಸುಧಾರಿತ ತಳಿಗಳ ಬೀಜಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯಿದೆ. ಹೊಸ ತಾಂತ್ರಿಕತೆಗಳ ಪರಿಚಯ, ರೈತರು ಮತ್ತು ವಿಜ್ಞಾನಿಗಳ ನಡುವೆ ಸಂವಾದ ಆಯೋಜಿಸಲಾಗುತ್ತಿದೆ. ಬೀಜ ಸಂಗ್ರಹದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದ್ದು, ದ್ವಿದಳ ಧಾನ್ಯಗಳ ಬೆಳೆಗಳತ್ತ ಗಮನಹರಿಸಿ ಎಂದರು.

ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್ ಮಾತನಾಡಿ, ಸುಧಾರಿತ ತಳಿಗಳ ಬೀಜಗಳು ಲಭ್ಯವಿದ್ದು, ಕಾಲಕಾಲಕ್ಕೆ ತಾಂತ್ರಿಕತೆ ಬಗ್ಗೆ ರೈತರಿಗೆ ಸಲಹೆ ನೀಡಲಾಗುತ್ತಿದೆ ಎಂದರು.

ಸುಧಾರಿತ ತಳಿಗಳ ಕುರಿತು ಸರ್ಕಾರಿ ಕೃಷಿ ಕಾಲೇಜು ಪ್ರಭಾರ ವಿಶೇಷಾಧಿಕಾರಿ ಡಾ.ಮಹಾಂತ ಶಿವಯೋಗಯ್ಯ ಮಾತನಾಡಿದರು. ನಂತರ ಬೀಜೋಪಾಚಾರದ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ಹಿರಿಯ ತಾಂತ್ರಿಕಾಧಿಕಾರಿ ಜಿ.ನಾರಪ್ಪ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಚಂದ್ರಕಾಂತ ನಾಡಗೌಡರ್, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳು ಡಾ.ಎಂ.ವಿ.ರವಿ, ತಜ್ಞರಾದ ಡಾ.ಆರ್.ಜ್ಯೋತಿ,ಡಾ. ಕವಿತಾ ಉಳ್ಳಿಕಾಶಿ, ಜೆ. ರಾಧಾ, ಆರ್.ಎಂ.ರೇವತಿ, ತಾಂತ್ರಿಕ ಅಧಿಕಾರಿ ಎನ್.ಶ್ರುತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net