ಸ್ನಾತಕೋತ್ತರ ಪರೀಕ್ಷಾ ಶುಲ್ಕ ಹೆಚ್ಚಳಕ್ಕೆ ಆಕ್ರೋಶ: ಗಂಗಾವತಿಯಲ್ಲಿ ಎಸ್‌ಎಫ್ಐ ತಾಲೂಕು ಸಮಿತಿ ಪ್ರತಿಭಟನೆ

090922 Gangavati SKNG SFI Protest
ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಎನ್.ಜಿ.ಹೆಬ್ಸೂರ್‌ಗೆ ಎಸ್‌ಎಫ್ಐ ತಾಲೂಕು ಸಮಿತಿ ಮನವಿ ಸಲ್ಲಿಸಿತು.
Published on

ಗಂಗಾವತಿ: ಸ್ನಾತಕೋತ್ತರ ಪರೀಕ್ಷಾ ಶುಲ್ಕ ಹೆಚ್ಚಿಸಿರುವ ವಿಎಸ್‌ಕೆ ವಿವಿ ಕ್ರಮ ಖಂಡಿಸಿ ಎಸ್‌ಎಫ್ಐ ತಾಲೂಕು ಸಮಿತಿ ಸದಸ್ಯರು ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜು ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.

ತಾಲೂಕು ಅಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ 1500 ರೂ. ನಿಗದಿಪಡಿಸಲಾಗಿದೆ. ಇದರಿಂದ ಬಡ ಮತ್ತು ಮೀಸಲು ವರ್ಗದ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತಿದೆ. 2 ಮತ್ತು 4ನೇ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು ಶುಲ್ಕ ಭರಿಸದೆ ಶಿಕ್ಷಣ ಮೊಟಕುಗೊಳಿಸುವ ಸ್ಥಿತಿ ಬಂದಿದೆ. ಅನೇಕರಿಗೆ ವಿದ್ಯಾರ್ಥಿ ವೇತನ ವಿತರಣೆಯಾಗಿಲ್ಲ. ಪರೀಕ್ಷಾ ಶುಲ್ಕದಲ್ಲಿ ವಿನಾಯಿತಿ ನೀಡಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದರು. ಪ್ರಾಚಾರ್ಯ ಡಾ.ಎನ್.ಜಿ.ಹೆಬ್ಸೂರ್‌ಗೆ ಮನವಿ ಸಲ್ಲಿಸಲಾಯಿತು. ರಾಜ್ಯಾಧ್ಯಕ್ಷ ಅಮರೇಶ ಕಡಗದ್, ಪದಾಧಿಕಾರಿಗಳಾದ ಶಿವಕುಮಾರ, ಮರಿನಾಗಪ್ಪ, ವೆಂಕಟೇಶ, ದೇವರಾಜ್, ವಡಕೆಪ್ಪ, ರೇಷ್ಮಾ, ಸಾವಿತ್ರಿ, ಅಶಾಬೇಗಂ, ಕಲ್ಪನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net