ಆನ್‌ಲೈನ್ ಅಂಚೆ ಸೇವೆ ಒದಗಿಸಿ

Gangavathi formar protest
ಅಂಚೆ ಕಚೇರಿಯಲ್ಲಿ ಆನ್‌ಲೈನ್ ಸೇವೆ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದ ಸದಸ್ಯರು ಗಂಗಾವತಿಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಪದಾಧಿಕಾರಿಗಳಾದ ನಾಗರಾಜಗೌಡ, ಮಲ್ಲಿಕಾರ್ಜುನ, ಮಂಜುನಾಥಗೌಡ, ಮೈಸೂರು ದೊಡ್ಡನಗೌಡ, ರಫೀ, ಕುಮಾರ ಲೋಕೇಶ ಇತರರಿದ್ದರು.
Published on


ಗಂಗಾವತಿ: ಅಂಚೆ ಕಚೇರಿಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಆನ್‌ಲೈನ್ ಸೇವೆಗಳನ್ನು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದ ಸದಸ್ಯರು ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು.

ಸಂಘದ ಅಧ್ಯಕ್ಷ ಶರಣಪ್ಪ ದೊಡ್ಮನಿ ಮಾತನಾಡಿ, 1854ರಲ್ಲಿ ಆರಂಭದವಾದ ಅಂಚೆ ಇಲಾಖೆ, ಬ್ಯಾಂಕಿಂಗ್ ಸೇವೆ ಒದಗಿಸುತ್ತಿದ್ದರೂ ಆನ್‌ಲೈನ್ ವ್ಯವಸ್ಥೆಯಿಲ್ಲ. ಗ್ರಾಮೀಣ ಭಾಗದಲ್ಲಿ ಅಂಚೆ ಕಚೇರಿಗಳಿದ್ದು, ಈಗಲೂ ಕೈಬರಹ ಸೇವೆಯೇ ಮುಂದುವರಿದಿದೆ. ಚೆಕ್‌ಬುಕ್, ಎಟಿಎಂ, ಆನ್‌ಲೈನ್ ಪ್ರಿಂಟಿಂಗ್, ಇ-ಪಾಸ್‌ಬುಕ್, ಇಂಟರ್‌ನೆಟ್ ಬ್ಯಾಂಕಿಂಗ್, ಆರ್‌ಟಿಜಿಎಸ್ ಸೇವೆಗಳನ್ನು ಒದಗಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಡಿಜಿಟಲ್ ಯುಗದಲ್ಲಿ ಆನ್‌ಲೈನ್ ವ್ಯವಸ್ಥೆಗೆ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ನಾಗರಾಜಗೌಡ, ಮಲ್ಲಿಕಾರ್ಜುನ, ಮಂಜುನಾಥಗೌಡ, ಮೈಸೂರು ದೊಡ್ಡನಗೌಡ, ರಫೀ, ಕುಮಾರ ಲೋಕೇಶ, ವಾಸು, ಹಂಪೇಶ ಹರಿಗೋಲು, ರ್ಇಾನ್, ಯೋಗೇಶ, ಬೆಟ್ಟಪ್ಪ, ಯಮನೂರ್ ನಾಯಕ, ಜಂಬಣ್ಣ, ನಗರ ಮತ್ತು ಗ್ರಾಮೀಣ ಭಾಗದ ಕಾರ್ಯಕರ್ತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net