

ಗಂಗಾವತಿ: ಆಧುನಿಕ ತಂತ್ರಜ್ಞಾನ ಕಲಿಕೆಗೆ ಪೂರಕವಾಗಿದ್ದು, ವಿಚಾರ ಸಂಕಿರಣಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ ಹೇಳಿದರು.
ನಗರದ ಹಳೇ ತಹಸಿಲ್ ಕಚೇರಿ ಬಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ವಾಣಿಜ್ಯ ವಿಭಾಗದಿಂದ ಶನಿವಾರ ಹಮ್ಮಿಕೊಂಡಿದ್ದ ಸಂಯೋಜಿತ ಮತ್ತು ಆನ್ ಲೈನ್ ಕಲಿಕೆಯ ಬೇಡಿಕೆಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ನಾತಕೋತ್ತರ ಕೇಂದ್ರದ ಮೊದಲ ವಿಚಾರ ಸಂಕಿರಣವಾಗಿದ್ದು, ಜ್ಞಾನದ ಅಭ್ಯುದಯಕ್ಕೆ ಆ್ ಲೈನ್ ಜೊತೆ ಆನ್ ಲೈನ್ ತಂತ್ರಜ್ಞಾನ ಬಳಸಿಕೊಳ್ಳಬೇಕು. ಜಗತ್ತು ಆಧುನಿಕ ತಂತ್ರಜ್ಞಾನದ ಮುಖೇನವೇ ಜ್ಞಾನದ ಶಿಖರ ತಲುಪುತ್ತಿದೆ. ವಿಶ್ವವಿದ್ಯಾಲಯದ ಯೋಜನೆಗಳನ್ನು ಸಮಪರ್ಕವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು.
ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕ ಮತ್ತು ಸಂಪನ್ಮೂಲ ವ್ಯಕ್ತಿ ಅಕ್ಕಿ ಮಾರುತಿ ಮಾತನಾಡಿ, ಆನ್‌ಲೈನ್ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಾಕಷ್ಟು ಅವಕಾಶಗಳಿದ್ದು, ಕೇಂದ್ರ ಸರ್ಕಾರದ ಇ-ಲರ್ನಿಂಗ್ ಯೋಜನೆ ಯುವಸಮುದಾಯದ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು. ಸರ್ಕಾರದ ಪ್ರಮುಖ ಅಪ್ಲಿಕೇಶನ್‌ಗಳಾದ ಸ್ವಯಂ, ಮೂಕ್ಸ್, ಸ್ವಯಂಪ್ರಭಾ ಇತರೆ ವಿಷಯಗಳ ಕುರಿತು ಮಾಹಿತಿ ನೀಡಿದರು.