ಬಡವರಿಗೆ ನಿವೇಶನ, ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯ

Gangavati CPI Protest
ಗಂಗಾವತಿ ನಗರಸಭೆ ಕಚೇರಿ ಮುಂದೆ ಸಿಪಿಐ ತಾಲೂಕು ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
Published on

ಗಂಗಾವತಿ: ಬಡ ಮತ್ತು ಮೀಸಲು ವರ್ಗದವರಿಗೆ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಸಿಪಿಐ ತಾಲೂಕು ಸಮಿತಿ ಸದಸ್ಯರು ನಗರಸಭೆ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ತಾಲೂಕು ಸಮಿತಿ ಕಾರ್ಯದರ್ಶಿ ಎ.ಎಲ್.ತಿಮ್ಮಣ್ಣ ಮಾತನಾಡಿ, ನಗರದ 35 ವಾರ್ಡ್‌ಗಳಲ್ಲಿ ವಾಸಿಸುತ್ತಿರುವ ಬಡ ಮತ್ತು ಮೀಸಲು ವರ್ಗದ ಬಹುತೇಕ ಕುಟುಂಬಗಳಿಗೆ ಸ್ವಂತ ಸೂರಿಲ್ಲ. ದುಬಾರಿ ಬಾಡಿಗೆ ಮನೆಗಳಲ್ಲಿ ಜೀವನ ಸಾಗಿಸಬೇಕಿದ್ದು, ದುಡಿದ ಬಹುಪಾಲು ಹಣ ಬಾಡಿಗೆಗೆ ಹೋಗುತ್ತಿದೆ. ಇದರಿಂದ ಬಡವರು ಜೀವನ ನಡೆಸುವುದು ಕಷ್ಟವಾಗಿದೆ. ವಿವಿಧ ವಸತಿ ಯೋಜನೆಗಳಡಿ ಮನೆ ಮಂಜೂರಾದರೂ ನಿವೇಶನದ ಕೊರತೆಯಿಂದ ನಗರಸಭೆ ಗುರಿ ಸಾಧಿಸುತ್ತಿಲ್ಲ. ಕೂಡಲೇ ನಿವೇಶನದ ಜತೆಗೆ ಮನೆಗಳನ್ನು ನಿರ್ಮಿಸಿಕೊಡಬೇಕು. ನಿರ್ಲಕ್ಷಿಸಿದರೆ ಕಚೇರಿ ಮುಂದೆ ಅನಿರ್ದಿಷ್ಟವಾಧಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿಗೆ ಮನವಿ ಸಲ್ಲಿಸಲಾಯಿತು.

ಪದಾಧಿಕಾರಿಗಳಾದ ಎ.ಹುಲುಗಪ್ಪ, ಶಿವಮ್ಮ ಹುಡೇದ್, ಎಂ.ಕಾಸಿಂಸಾಬ್, ಯಮುನಮ್ಮ, ನಾಗೇಶ ಭೋವಿ, ಶಂಕ್ರಪ್ಪ ಕುರ‌್ರಟ್ಟಿ, ಆಂಜನೇಯ ನಾಯಕ, ಮುತ್ತಣ್ಣ, ಕರಿಯಪ್ಪ ಸಿಂಗನಾಳ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net