ಜನಮಾನಸದಲ್ಲಿ ಉಳಿವ ಕಾವ್ಯಗಳಿಗೆ ಸಾರ್ವಕಾಲಿಕ ಮಾನ್ಯತೆ

KAVIGOSTI
ಗಂಗಾವತಿ ತಾಪಂ ಆವರಣದ ಕಸಾಪ ಭವನದಲ್ಲಿ ಕಾವ್ಯಲೋಕದಿಂದ ಆಯೋಜಿಸಿದ್ದ 103ನೇ ಕವಿಗೋಷ್ಠಿಯಲ್ಲಿ ಸಾಹಿತಿ ಹಾಗೂ ಕವಿ ಮನೋಹರ ಬೊಂದಾಡೆ ಸೋಮವಾರ ಮಾತನಾಡಿದರು. ಕಸಾಪ ತಾಲೂಕಾಧ್ಯಕ್ಷ ಶ್ರೀನಿವಾಸ ಅಂಗಡಿ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಚನ್ನಬಸವ ಜೇಕಿನ್, ನಿವೃತ್ತ ಪ್ರಾಚಾರ್ಯ ಪ್ರೊ.ಬಿ.ಸಿ.ಐಗೋಳ ಇತರರಿದ್ದರು.
Published on

ಗಂಗಾವತಿ: ಅಧ್ಯಯನ ಮೂಲಕ ಗಟ್ಟಿತನದ ಕಾವ್ಯರಚನೆಯಾಗಬೇಕಿದ್ದು, ಜನಮಾನಸದಲ್ಲಿ ಉಳಿಯುವ ಕಾವ್ಯಗಳಿಗೆ ಸಾರ್ವಕಾಲಿಕ ಮಾನ್ಯತೆಯಿದೆ ಎಂದು ಸಾಹಿತಿ ಹಾಗೂ ಕವಿ ಮನೋಹರ ಬೊಂದಾಡೆ ಹೇಳಿದರು.

ನಗರದ ತಾಪಂ ಆವರಣದ ಕಸಾಪ ಭವನದಲ್ಲಿ ಕಾವ್ಯಲೋಕದಿಂದ ಸೋಮವಾರ ಆಯೋಜಿಸಿದ್ದ 103ನೇ ಕವಿಗೋಷ್ಠಿಯಲ್ಲಿ ಮಾತನಾಡಿದರು. ಪರಿಣಾಮಕಾರಿ ಕಾವ್ಯಗಳ ಮೂಲಕ ಕವಿ, ಕವಯತ್ರಿಯರು ಜನ ಸಮುದಾಯಗಳಲ್ಲಿ ಉಳಿಯಬೇಕು. ಚೌಕಟ್ಟು ಮೀರದಂತೆ ಕಾವ್ಯ ರಚನೆಯಾಗಬೇಕಿದ್ದು, ಕನ್ನಡ ಮತ್ತು ಸಾಹಿತ್ಯದ ಉಳಿವಿಗೆ ಎಲ್ಲರೂ ಯತ್ನಿಸಬೇಕು. ಕಾವ್ಯದಿಂದ ಕವಿ, ಕವಯತ್ರಿಯರು ಗುರುತಿಸುವಂತಾಗಬೇಕೆಂದರು.

ಕಸಾಪ ತಾಲೂಕಾಧ್ಯಕ್ಷ ಶ್ರೀನಿವಾಸ ಅಂಗಡಿ ಮಾತನಾಡಿ, ಅಧ್ಯಯನದಿಂದ ರಚನೆಗೊಳ್ಳುವ ಸಾಹಿತ್ಯಕ್ಕೆ ಸತ್ವವಿರುತ್ತೆ. ಸಾಹಿತ್ಯ ಆಲಿಕೆ, ಅಧ್ಯಯನದಿಂದ ವ್ಯಕ್ತಿ ಪರಿಪೂರ್ಣನಾಗುತ್ತಾನೆ ಎಂದರು.

ಕನ್ನಡಸೇನೆ ಜಿಲ್ಲಾಧ್ಯಕ್ಷ ಚನ್ನಬಸವ ಜೇಕಿನ್, ಕಲಾವಿದರಾದ ವಿರೂಪಾಕ್ಷಪ್ಪ ಸಿರವಾರ, ಮಲ್ಕೇಶ ಕೋಟೆ, ನಿವತ್ತ ಪಾಚಾರ್ಯ ಪ್ರೊ.ಬಿ.ಸಿ.ಐಗೋಳ, ಕಾವ್ಯಲೋಕ ಗೌರವ ಅಧ್ಯಕ್ಷ ಡಾ.ಶಿವಕುಮಾರ ಮಾ.ಪಾಟೀಲ್ ಮಾತನಾಡಿದರು.

ಕಾವ್ಯಲೋಕ ಅಧ್ಯಕ್ಷ ಎಂ.ಪರಶುರಾಮಪ್ರಿಯ, ಎಸ್‌ಕೆಎನ್‌ಜಿ ಕಾಲೇಜಿನ ಪ್ರಾಚಾರ್ಯ ಡಾ.ಜಾಜಿ ದೇವೇಂದ್ರಪ್ಪ, ಸಾಹಿತಿ ಎ.ಕಷ್ಣ ಆಶಿಸ್, ಆರ್.ಎನ್.ರಾಯಭಾಗಿ, ತಾರಾ ಸಂತೋಷ, ಜಯಶ್ರೀ ಹಕ್ಕಂಡಿ ಇತರರಿದ್ದರು.

ನಂತರ ನಡೆದ ಕವಿಗೋಷ್ಠಿಯಲ್ಲಿ ಎಚ್.ನಾಗರತ್ನಾ, ಯು.ಆರ್.ಶಿವರುದ್ರಪ್ಪ, ಅವನಿ ಮೂಥಾ, ಭೀಮನಗೌಡ, ಚಿದಾನಂದ ಕೀರ್ತಿ, ಶಿವನಗೌಡ ತೆಗ್ಗಿ, ಮೈಲಾರಪ್ಪ ಬೂದಿಹಾಳ, ಶರಣಪ್ಪ ಮೆಟ್ರಿ, ರಾಧಾ ಉಮೇಶ, ನೀಲಮ್ಮ ಹಿರೇಮಠ, ಪವನ್‌ಕುಮಾರ ಗುಂಡೂರು, ನರ್ಮದಾಬಾಯಿ ಕುಲಕರ್ಣಿ, ಮಹಾದೇವ ಮೋಟಿ, ಚಿದಂಬರ ಬಡಿಗೇರ, ಪ್ರಸಾದ ಬೂದಿಹಾಳ, ಸೋಮಣ್ಣ ಬಾಗೇವಾಡಿ ಕಾವ್ಯ ವಾಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net