ವಕೀಲಿ ವೃತ್ತಿಯಲ್ಲಿ ಶಿಸ್ತು-ಸಂಯಮ ಅಗತ್ಯ

Foundation Day
ಗಂಗಾವತಿ ವಕೀಲರ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪರಿಷತ್ ಸಂಸ್ಥಾಪನೆ ದಿನಾಚರಣೆ ಮತ್ತು ಯುವ ವಕೀಲರಿಗೆ ತರಬೇತಿ ಕಾರ್ಯಾಗಾರದಲ್ಲಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಸೋಮವಾರ ಮಾತನಾಡಿದರು. ಜೆಎಂಎ್ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ಜಿ.ಬಿ.ಹಳ್ಳಾಕಾಯಿ, ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎಂ.ಮಂಜುನಾಥ ಇತರರಿದ್ದರು.
Published on

ಗಂಗಾವತಿ: ಯುವ ವಕೀಲರು ಪ್ರಕರಣಗಳ ಬಗ್ಗೆ ಸಮಗ್ರ ಅಧ್ಯಯನದೊಂದಿಗೆ ಕೋರ್ಟ್ ಹಾಲ್‌ನಲ್ಲಿ ವಿಚಾರಣೆ ಎದುರಿಸಬೇಕಿದ್ದು, ವೃತ್ತಿಯಲ್ಲಿ ಶಿಸ್ತು ಮತ್ತು ಸಂಯಮ ಮುಖ್ಯ ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಹೇಳಿದರು.

ನಗರದ ವಕೀಲರ ಸಂಘದ ಸಭಾಂಗಣದಲ್ಲಿ ಅಖಿಲ ಭಾರತ ಅಧಿವಕ್ತಾ ಪರಿಷತ್ ಕರ್ನಾಟಕ ಉತ್ತರ ಬಳ್ಳಾರಿ ವಿಭಾಗ, ಜಿಲ್ಲಾ ಘಟಕ ಮತ್ತು ತಾಲೂಕು ವಕೀಲರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಪರಿಷತ್ ಸಂಸ್ಥಾಪನೆ ದಿನಾಚರಣೆ ಮತ್ತು ಯುವ ವಕೀಲರಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ವಿಷಯ ಮಂಡನೆ ವಿಚಾರದಲ್ಲಿ ಯುವವಕೀಲರು ಸಮರ್ಥರಾಗಿರಬೇಕಿದ್ದು, ಪ್ರತಿಯೊಂದರ ಬಗ್ಗೆಯೂ ಅಧ್ಯಯನ ಮಾಡಿರಬೇಕು. ಅದರಂತೆ ಪ್ರತಿವಾದಿಗಳ ಬಗ್ಗೆಯೂ ಯಾವುದೇ ದ್ವೇಷ ಮನೋಭಾವನೆ ಹೊಂದಬಾರದು. ಕೋರ್ಟ್ ಹಾಲ್‌ಗೆ ಬರುವಾಗ ಮತ್ತು ಹೋಗುವಾಗ ಶಿಸ್ತನ್ನು ಕಡ್ಡಾಯ ಪಾಲಿಸಬೇಕೆಂದರು.

ಕೋರ್ಟ್ ರೂಂ ರೂಲ್ಸ್, ವೃತ್ತಿಪರ ನೀತಿಶಾಸದ ಕುರಿತು ಮಾಹಿತಿ ನೀಡಿದರು. ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎಂ.ಮಂಜುನಾಥ ಪ್ರಾಸ್ತಾವಿಕ ಮಾತನಾಡಿ, 1992ರಲ್ಲಿ ಅಧಿವಕ್ತಾ ಪರಿಷತ್ ಅಸ್ತಿತ್ವಕ್ಕೆ ಬಂದಿದ್ದು, ನೀತಿ ಶಾಸ ಕುರಿತು ತರಬೇತಿ ನೀಡಲಾಗುತ್ತಿದೆ ಎಂದರು.

ಜೆಎಂಎ್ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ಜಿ.ಬಿ.ಹಳ್ಳಾಕಾಯಿ, ಪ್ರಧಾನ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಮೇಘಾ ಸೋಮಣ್ಣನವರ್, ಕೆಎಸ್‌ಬಿಸಿ ಅಧ್ಯಕ್ಷ ಎಸ್.ಎಸ್.ಮಿಟ್ಟಲ್‌ಕೋಡ್, ವಕೀಲರ ಸಂಘದ ತಾಲೂಕಾಧ್ಯಕ್ಷ ಎಸ್.ಎನ್. ನಾಯಕ, ಉಪಾಧ್ಯಕ್ಷ ಪ್ರಕಾಶ ಕುಸಬಿ, ಪರಿಷತ್ ಉಪಾಧ್ಯಕ್ಷರಾದ ಬಿ.ವಿ.ಸಜ್ಜನ್, ಎಸ್.ಬಿ.ಪಾಟೀಲ್, ಪ್ರಧಾನ ಕಾರ್ಯದರ್ಶಿ ಶರಣು ಸಾವರಕರ್, ವಕೀಲ ಜಿ.ಶಿವಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net