ದೇವರ ಸ್ಮರಣೆಯಿಂದ ಸಂಕಷ್ಟ ದೂರ

071222 Gangavati Pampanagara Datta Jayanti
ಗಂಗಾವತಿಯ ಶ್ರೀ ಪ್ರಸನ್ನ ಪಂಪಾ ವಿರೂಪಾಕ್ಷೇಶ್ವರ ದೇವಾಲಯದಲ್ಲಿ ಶ್ರೀ ದತ್ತ ಜಯಂತಿ ಹಮ್ಮಿಕೊಳ್ಳಲಾಗಿತ್ತು.
Published on

ಗಂಗಾವತಿ: ನಗರದ ಪಂಪಾನಗರದ ಶ್ರೀ ಪ್ರಸನ್ನ ಪಂಪಾವಿರೂಪಾಕ್ಷೇಶ್ವರ ದೇವಾಲಯದಲ್ಲಿ ಶ್ರೀ ದತ್ತ ಜಯಂತಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಬುಧವಾರ ಹಮ್ಮಿಕೊಳ್ಳಲಾಗಿತ್ತು.

ದೇವಾಲಯದಲ್ಲಿ ಮೂರ್ತಿಗೆ ಅಭಿಷೇಕ, ಹೂವಿನ ಅಲಂಕಾರ, ಶ್ರೀ ದತ್ತ ಭಾವ ಚಿತ್ರಕ್ಕೆ ವಿಶೇಷ ಪೂಜೆ, ಅಷ್ಟಾವಧಾನ ಭಜನೆ, ತೊಟ್ಟಿಲು ಸೇವೆ, ನಿರಂತರ ಪಾರಾಯಣ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ದೇವಾಲಯದ ಅರ್ಚಕ ಪ್ರಸನ್ನ ಕುಮಾರ ರಾಂಭಟ್ ಜೋಶಿ ಮಾತನಾಡಿ, ದೇವರ ಸ್ಮರಣೆಯಿಂದ ಸಕಲ ಸಂಕಷ್ಟಗಳನ್ನು ದೂರ ಮಾಡಿಕೊಳ್ಳಬಹುದಾಗಿದ್ದು, ದೇವಾಲಯದಲ್ಲಿ ನಿರಂತರ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು. ವಿವೇಕಾನಂದ ಜೋಶಿ, ಶ್ರೀರಾಮ ಜೋಶಿ, ಅನಿಲ್ ಭಟ್, ನಾಗೇಶ ಆಚಾರ್, ರವಿಕುಮಾರ ಹೂಲಗೇರಿ, ದಿಗಂಬರ್‌ರಾವ್ ವೈದ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net