ತಾಪಮಾನ ತಡೆ ಆದ್ಯತೆಯಾಗಲಿ

Gangavathi project samruddi programe
ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಭತ್ತ ಬೆಳೆಗಾರರಿಗೆ ಹಮ್ಮಿಕೊಂಡಿದ್ದ ಪ್ರಾಜೆಕ್ಟ್ ಸಮೃದ್ಧಿ ಸಮಾಲೋಚನೆ ಸಭೆಯನ್ನು ರಾಯಚೂರು ಕೃಷಿ ವಿವಿ ವ್ಯವಸ್ಥಾಪನ ಮಂಡಳಿ ಮಾಜಿ ನಿರ್ದೇಶಕ ಜಿ.ಶ್ರೀಧರ್ ಕೇಸರಹಟ್ಟಿ ಶುಕ್ರವಾರ ಉದ್ಘಾಟಿಸಿದರು. ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್, ತಳಿತಜ್ಞ ಡಾ.ಮಹಾಂತ ಶಿವಯೋಗಿ ಇತರರಿದ್ದರು.
Published on

ಗಂಗಾವತಿ: ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಭತ್ತದ ಬೆಳೆಗಾರರು ಸುಧಾರಿತ ಬೇಸಾಯ ಕ್ರಮ ಕೈಗೊಳ್ಳಬೇಕಿದ್ದು, ಅಗತ್ಯ ಪೋಷಕಾಂಶ ಬಳಸುವಂತೆ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞೆ ಬಿ.ಎನ್. ಶ್ವೇತಾ ಸಲಹೆ ನೀಡಿದರು.

ನಗರದ ಕೃಷಿ ವಿಜ್ಞಾನ ಕೇಂದ್ರದ ಸಭಾಂಗಣದಲ್ಲಿ ಕೆವಿಕೆ ಮತ್ತು ಬೆಂಗಳೂರಿನ ಸ್ಟ್ರಿಂಗ್ ಬಯೋ ಸಂಸ್ಥೆಯಿಂದ ಭತ್ತದ ಬೆಳೆಗಾರರಿಗಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಾಜೆಕ್ಟ್ ಸಮೃದ್ಧಿ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.

ಜಗತ್ತಿನ ಶೇ.50 ಜನ ಭತ್ತ ಮತ್ತು ಭತ್ತದ ಉತ್ಪನ್ನಗಳನ್ನೇ ಅವಲಂಬಿಸಿದ್ದು, ಅಧಿಕ ಇಳುವರಿ ಪಡೆಯುವುದರ ಜತೆಗೆ ತಾಪಮಾನಕ್ಕೆ ಪರಿಣಾಮ ಬೀರುವ ಅನಿಲಗಳನ್ನು ಗೊತ್ತಿಲ್ಲದಂತೆ ಉತ್ಪತ್ತಿಸಲಾಗುತ್ತಿದೆ. ಪರಿಸರಕ್ಕೆ ಮಾರಕವಾದ ಅನಿಲಗಳ ನಿಯಂತ್ರಣಕ್ಕೆ ಸುಧಾರಿತ ಬೇಸಾಯ ಕ್ರಮ ಅಗತ್ಯವಿದ್ದು, ತಜ್ಞರು ಸೂಚಿಸುವ ಪೋಷಕಾಂಶಗಳನ್ನೇ ಬಳಸಬೇಕಿದೆ. ತಾಪಮಾನ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನದ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿದರು.

ಸಂಸ್ಥೆ ಪ್ರತಿನಿಧಿ ಸಲ್ಮಾನ್ ಮಾತನಾಡಿ, ರೈತರ ಆದಾಯ ಹೆಚ್ಚಳ ಜತೆಗೆ ಪರಿಸರಕ್ಕೂ ಅನುಕೂಲವಾಗುವಂತೆ ಬೇಸಾಯ ಕ್ರಮ ಪ್ರಸ್ತುತ ದಿನಮಾನದಲ್ಲಿ ಅಗತ್ಯವಿದೆ ಎಂದರು.

ನಂತರ ರೈತರೊಂದಿಗೆ ಸಂವಾದ ಹಮ್ಮಿಕೊಳ್ಳಲಾಗಿತ್ತು. ರಾಯಚೂರು ಕೃಷಿ ವಿವಿ ವ್ಯವಸ್ಥಾಪನ ಮಂಡಳಿ ಮಾಜಿ ನಿರ್ದೇಶಕ ಜಿ.ಶ್ರೀಧರ್ ಕೇಸರಹಟ್ಟಿ, ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್, ತಳಿತಜ್ಞ ಡಾ.ಮಹಾಂತ ಶಿವಯೋಗಿ, ಸರ್ಕಾರಿ ಕೃಷಿ ಕಾಲೇಜು ವಿಶೇಷಾಧಿಕಾರಿ ಡಾ.ಯಂಜೇರಪ್ಪ ಎಸ್.ಟಿ., ಜೇನು ಕೃಷಿ ತಜ್ಞ ಡಾ.ಬದರಿಪ್ರಸಾದ, ಸಂಸ್ಥೆ ಪ್ರತಿನಿಧಿ ಪ್ರಸಾದ ನಾಯರ್, ವರ್ತಕರ ಸಂಘದ ತಾಲೂಕಾಧ್ಯಕ್ಷ ಶ್ರೀನಿವಾಸ ಕೆಲೋಜಿ ಹಾಗೂ ವಿವಿಧ ತಾಲೂಕಿನ ರೈತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net