

ಗಂಗಾವತಿ: ಸಂಘಟನಾತ್ಮಕವಾಗಿ ಹಕ್ಕುಗಳನ್ನು ಪಡೆಯಬೇಕಿದ್ದು, ಶೋಷಿತರ ಪರ ಧ್ವನಿ ಎತ್ತುವಂತೆ ಭಾರತೀಯ ಪ್ರಜಾ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಪಂಪಾಪತಿ ಸಿದ್ದಾಪುರ ಹೇಳಿದರು.
ನಗರದ ಕಸಾಪ ಭವನದಲ್ಲಿ ಭಾರತೀಯ ಪ್ರಜಾಸೇನೆ ಜಿಲ್ಲಾ ಸಮಿತಿ ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣ ಮತ್ತು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನರನ್ನು ಜಾಗೃತಗೊಳಿಸುವ ಯೋಜನೆಗಳನ್ನು ಹಮ್ಮಿಕೊಳ್ಳಬೇಕಿದ್ದು, ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಸಂಘಟನೆ ಮೇಲಿದೆ ಎಂದರು.
ಸಂಘಟನೆ ಉದ್ದೇಶ, ಹೋರಾಟ ಮತ್ತು ಹಕ್ಕುಗಳ ಕುರಿತು ರಾಜ್ಯಾಧ್ಯಕ್ಷ ಟಿ.ವೇಣುಗೋಪಾಲ ಮಾತನಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಮತ್ತು ವಿಭಾಗೀಯ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ, ಸಂಸ್ಥಾಪಕ ಅಧ್ಯಕ್ಷ ಆರ್.ಮಂಜುನಾಥ, ವಿಭಾಗೀಯ ಕಾರ್ಯದರ್ಶಿ ಹುಲುಗಪ್ಪ ಕೊಜ್ಜಿ, ಜಿಲ್ಲಾ ಗೌರವಾಧ್ಯಕ್ಷ ಅಮರೇಶ, ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ, ಉಪಾಧ್ಯಕ್ಷರಾದ ಸೋಮನಾಥ ಅಕ್ಕಿರೊಟ್ಟಿ, ರಾಮಪ್ಪ ಹತ್ನಟ್ಟಿ, ಸಂಘಟನಾ ಕಾರ್ಯದರ್ಶಿ ಜಡಿಯಪ್ಪ, ಸಹಕಾರ್ಯದರ್ಶಿ ವೆಂಕೋಬ ಕಂಪ್ಲಿ, ತಾಲೂಕಾಧ್ಯಕ್ಷ ಅಯ್ಯಪ್ಪ, ಉಪಾಧ್ಯಕ್ಷ ಕೃಷ್ಣ ಹೊಸಳ್ಳಿ, ಪ್ರಧಾನ ಕಾರ್ಯದರ್ಶಿ ಪಂಪಾಪತಿ ಹೊಸಳ್ಳಿ, ಸಹಕಾರ್ಯದರ್ಶಿ ರವಿ ಇತರರಿದ್ದರು.