ಪೌಷ್ಟಿಕ ಆಹಾರದಿಂದ ರೋಗ ನಿಯಂತ್ರಣ

gvt-1
ಗಂಗಾವತಿ ಅಮರಭಗತ್‌ಸಿಂಗ್ ನಗರದ ದೀಪಾ ಜ್ಞಾನ ವಿಕಾಸ ಕೇಂದ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಜಾಗೃತಿ ಅಭಿಯಾನದಲ್ಲಿ ಕ್ಷಯ ನಿಯಂತ್ರಣ ವಿಭಾಗದ ಮೇಲ್ವಿಚಾರಕ ಎಚ್.ಮಲ್ಲಿಕಾರ್ಜುನ ಮಾತನಾಡಿದರು. ಉಪವಿಭಾಗ ಆಸ್ಪತ್ರೆ ಆಪ್ತ ಸಮಾಲೋಚಕ ಶಿವಾನಂದ ನಾಯ್ಕರ್ ಉದ್ಘಾಟಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಧಾ, ವಲಯ ಮೇಲ್ವಿಚಾರಕಿ ನಾಗಮಣಿ ಇತರರಿದ್ದರು.
Published on

ಗಂಗಾವತಿ: ಪೌಷ್ಟಿಕ ಆಹಾರ ಸೇವನೆಯಂದ ಸ್ವಾಸ್ತ್ಯ ಆರೋಗ್ಯ ಕಾಪಾಡಲು ಸಾಧ್ಯ ಎಂದು ಉಪವಿಭಾಗ ಆಸ್ಪತ್ರೆ ಆಪ್ತ ಸಮಾಲೋಚಕ ಶಿವಾನಂದ ನಾಯ್ಕರ್ ಹೇಳಿದರು.

ನಗರದ ಅಮರ ಭಗತ್‌ಸಿಂಗ್ ನಗರದ ದೀಪಾ ಜ್ಞಾನ ವಿಕಾಸ ಕೇಂದ್ರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ ಪೌಷ್ಟಿಕ ಆಹಾರ ಜಾಗೃತಿ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ನಿಯಮಿತ ಪೌಷ್ಟಿಕ ಆಹಾರ ಬಳಕೆಯಿಂದ ಸಂಭವನೀಯ ರೋಗ ನಿಯಂತ್ರಿಸಬಹುದಾಗಿದ್ದು, ದೈಹಿಕ ಸದೃಢತೆ ಹೆಚ್ಚಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಕ್ಷಯ ರೋಗ ನಿಯಂತ್ರಣ ವಿಭಾಗದ ಮೇಲ್ವಿಚಾರಕ ಎಚ್.ಮಲ್ಲಿಕಾರ್ಜುನ ಮಾತನಾಡಿ, ಪೌಷ್ಟಿಕ ಆಹಾರ ಕೊರತೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ನಿಯಮಿತ ಆಹಾರ ಪದ್ಧತಿ ರೂಢಿಸಿಕೊಳ್ಳುವಂತೆ ತಿಳಿಸಿದರು.

ಪೌಷ್ಟಿಕ ಆಹಾರ ತಯಾರಿಕೆ ಪ್ರಾತ್ಯಕ್ಷತೆ ನಡೆಯಿತು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಧಾ, ವಲಯ ಮೇಲ್ವಿಚಾರಕಿ ನಾಗಮಣಿ, ಒಕ್ಕೂಟದ ಅಧ್ಯಕ್ಷೆ ರೇಣುಕಮ್ಮ ಸೇರಿ ಸೇವಾ ಪ್ರತಿನಿಧಿಗಳು ಮತ್ತು ಕೇಂದ್ರದ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net