ಕೌಶಲಾಧಾರಿತ ಶಿಕ್ಷಣಕ್ಕೆ ಆದ್ಯತೆ

NSS activity
ಗಂಗಾವತಿ ಕೆಸಿಎಸ್ ಮಹಿಳಾ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟ, ಕ್ರೀಡೆ, ಸಾಂಸ್ಕೃತಿಕ ಮತ್ತು ಎನ್ನೆಸ್ಸೆಸ್ ಚಟುವಟಿಕೆಗಳ ಕಾರ್ಯಕ್ರಮವನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಂಗಳವಾರ ಉದ್ಘಾಟಿಸಿದರು. ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ, ಸಂಘದ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ ಇತರರಿದ್ದರು.
Published on

ಗಂಗಾವತಿ: ಮಾನತೆಯ ತತ್ವಕ್ಕೆ ಆದ್ಯತೆ ನೀಡಿರುವ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ, ಮಹಿಳಾ ಶಿಕ್ಷಣಕ್ಕೂ ಪ್ರಾಮುಖ್ಯ ನೀಡಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ನಗರದ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕೆಸಿಎಸ್ ಮಹಿಳಾ ಪದವಿ ಕಾಲೇಜಿನಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ವಿದ್ಯಾರ್ಥಿ ಒಕ್ಕೂಟ, ಕ್ರೀಡೆ, ಸಾಂಸ್ಕೃತಿಕ ಮತ್ತು ಎನ್ನೆಸ್ಸೆಸ್ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದರು. ನರ್ಸರಿಯಿಂದ ಸ್ನಾತಕೋತ್ತರವರೆಗಿನ ಶಿಕ್ಷಣದಲ್ಲಿ ಮಹಿಳೆಯರಿಗೂ ಅವಕಾಶವಿದ್ದು, ಉತ್ತಮ ಲಿತಾಂಶದಲ್ಲೂ ವಿದ್ಯಾರ್ಥಿನಿಯರೇ ಮುಂದಿದ್ದಾರೆ. ಪಠ್ಯ, ಪಠ್ಯೇತರ ಮತ್ತು ಕೌಶಲಾಭಿವೃದ್ಧಿ ಆಧಾರಿತ ಶಿಕ್ಷಣಕ್ಕೂ ಸಂಘ ಆದ್ಯತೆ ನೀಡಿದೆ ಎಂದರು.

ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಮಾತನಾಡಿ, ಅಧ್ಯಯನಶೀಲದೊಂದಿಗೆ ಉನ್ನತ ಸಾಧನೆಯತ್ತ ಗಮನಹರಿಸಬೇಕಿದ್ದು, ಮಹಿಳಾ ಕಾಲೇಜಿಗೆ ಅತಿ ಹೆಚ್ಚು ರ‌್ಯಾಂಕ್‌ಗಳು ಬಂದಿವೆ ಎಂದರು.

ದಕ್ಷಿಣ ಭಾರತ ಗ್ರಾಹಕರ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಈ.ಧನರಾಜ್‌ರನ್ನು ಸನ್ಮಾನಿಸಲಾಯಿತು. ಸಂಘದ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ, ಕಾರ್ಯದರ್ಶಿ ಶರಣೇಗೌಡ ಮಾ.ಪಾಟೀಲ್, ಸಹಕಾರ್ಯದರ್ಶಿ ಎಚ್.ಎಂ. ಮಂಜುನಾಥ, ನಿರ್ದೇಶಕ ರಾಚಯ್ಯಸ್ವಾಮಿ ಹುಚ್ಚೇಶ್ವರಮಠ, ಪ್ರಾಚಾರ್ಯರಾದ ಡಾ.ಶರಣಬಸಪ್ಪ ಕೋಲ್ಕಾರ್, ಪ್ರೊ.ಜಿ.ಬಸವರಾಜ ಅಯೋಧ್ಯಾ, ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀದೇವಿ, ಸಹ ಕಾರ್ಯದರ್ಶಿ ಶಫೀನ್ ಅಂಜುಮ್, ಉಪನ್ಯಾಸಕರಾದ ಪ್ರೊ.ಶಿವಮ್ಮ ಪ್ರಕಾಶ, ಡಾ. ಶಾರದಾ ಪಾಟೀಲ್, ಡಾ. ಅರ್ಚನಾ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net