ನರೇಗಾ ಸಿಬ್ಬಂದಿಯಿಂದ ತಾರತಮ್ಯ ನೀತಿ, ಭಾರತೀಯ ಪ್ರಜಾ ಸಂಘ ತಾಲೂಕು ಘಟಕ ಆರೋಪ

protest with laborers
ನರೇಗಾ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಭಾರತೀಯ ಪ್ರಜಾ ಸಂಘ ತಾಲೂಕು ಘಟಕದ ಸದಸ್ಯರು ಗಂಗಾವತಿ ತಾಪಂ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು. ಗ್ರಾಮ ಘಟಕದ ಅಧ್ಯಕ್ಷ ದುರುಗಪ್ಪ ಕಾಗಿ, ಪದಾಧಿಕಾರಿಗಳಾದ ನೀಲಪ್ಪ ಕುಕನೂರ, ಲೋಕೇಶ, ಶರಣಪ್ಪ, ನಾಗರಾಜ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಹಣವಾಳ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ಭಾರತೀಯ ಪ್ರಜಾ ಸಂಘ ತಾಲೂಕು ಘಟಕದ ಸದಸ್ಯರು ತಾಪಂ ಕಚೇರಿ ಮುಂದೆ ಮಂಗಳವಾರ ವಿವಿಧ ಗ್ರಾಮಗಳ ಕೂಲಿಕಾರರೊಂದಿಗೆ ಪ್ರತಿಭಟನೆ ನಡೆಸಿ ಇಒ ರಾಮರೆಡ್ಡಿ ಪಾಟೀಲ್‌ಗೆ ಮನವಿ ಸಲ್ಲಿಸಿದರು.

ಗ್ರಾಮ ಘಟಕದ ಅಧ್ಯಕ್ಷ ದುರುಗಪ್ಪ ಕಾಗಿ ಮಾತನಾಡಿ, ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ಗ್ರಾಪಂ ಸಿಬ್ಬಂದಿ ತಾರತಮ್ಯ ನೀತಿ ಅನುಸರಿಸುತ್ತಿದ್ದು, ಕೆಲಸ ಮಾಡಿದವರನ್ನು ಬಿಟ್ಟು ಬೇರೆಯವರ ಹೆಸರನ್ನು ಹಾಜರಾತಿಯಲ್ಲಿ ಹಾಕುತ್ತಿದ್ದಾರೆ. 100 ದಿನ ಕೆಲಸ ನೀಡುವಲ್ಲಿ ವಿಲವಾಗಿದ್ದು, ನಿರ್ಲಕ್ಷ್ಯವಹಿಸುತ್ತಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು.

ಕೆಲಸ ಮಾಡುವ ಜಾಗದಲ್ಲಿ ನೆರಳಿನ ವ್ಯವಸ್ಥೆ, ಕುಡಿವ ನೀರು ಮತ್ತು ಪ್ರಥಮ ಚಿಕಿತ್ಸೆಗೆ ಆದ್ಯತೆ ನೀಡಬೇಕು. ದುಡಿದ ಕೂಲಿಕಾರರಿಗೆ ಸಕಾಲಕ್ಕೆ ಕೂಲಿ ನೀಡಬೇಕಿದ್ದು, ಯೋಜನೆ ಸಮರ್ಪಕ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ನೀಲಪ್ಪ ಕುಕನೂರ, ಲೋಕೇಶ, ಶರಣಪ್ಪ, ನಾಗರಾಜ, ದುರುಗಪ್ಪ, ಮಲ್ಲಪ್ಪ ಛಲವಾದಿ, ಸೂರಪ್ಪ, ಅಯ್ಯಪ್ಪ, ಹನುಮಂತಪ್ಪ, ರಾಜಪ್ಪ, ಚನ್ನಪ್ಪ, ಹುಸೇನಮ್ಮ, ಸೋಮಮ್ಮ, ಗಣೇಶ, ಶಿವಾನಂದ, ವೆಂಕಟೇಶ, ಹನುಮಂತಪ್ಪ, ದುರುಗಪ್ಪ, ಲಕ್ಷ್ಮಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net