ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಿ

groundwater increase
ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡ ನಾಲಾಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ತಾಪಂಇಒ ರಾಮರೆಡ್ಡಿ ಪಾಟೀಲ್ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.ಗ್ರಾಪಂ ಅಧ್ಯಕ್ಷ ಶಿವಮೂರ್ತಿ ಯಾದವ್, ಸದಸ್ಯ ಸಂತೋಷಕುಮಾರ, ಪಿಡಿಒ ಸಿ.ಇಂದಿರಾ,ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ ಇತರರಿದ್ದರು.
Published on

ಗಂಗಾವತಿ: ನರೇಗಾ ಯೋಜನೆ ಪಾರದರ್ಶಕ ಅನುಷ್ಠಾನಕ್ಕಾಗಿ ದಿನಕ್ಕೆ 2 ಬಾರಿ ಹಾಜರಾತಿ ಕಡ್ಡಾಯವಾಗಿದ್ದು, ಗ್ರಾಪಂ ಸಿಬ್ಬಂದಿ ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ತಾಪಂ ಇಒ ರಾಮರೆಡ್ಡಿ ಪಾಟೀಲ್ ಹೇಳಿದರು.

ತಾಲೂಕಿನ ಚಿಕ್ಕಬೆಣಕಲ್ ಗ್ರಾಪಂ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡ ನಾಲಾಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಮಾತನಾಡಿದರು.

ಎನ್‌ಎಂಎಂಎಸ್ ಹಾಜರಾತಿ ಸರಿಯಾಗಿ ಹಾಕಬೇಕಿದ್ದು, ಇಂಜಿನಿಯರ್ ನೀಡುವ ಅಳತೆಯಂತೆ ಕೂಲಿಕಾರರು ಕೆಲಸ ನಿರ್ವಹಿಸಬೇಕು. ಅಂತರ್ಜಲ ಹೆಚ್ಚಳ ಪೂರಕವಾದ ಯೋಜನೆಗಳಿಗೆ ಮೊದಲ ಅದ್ಯತೆ ನೀಡಬೇಕಿದ್ದು, ಕೂಲಿಕಾರರ ಗುಂಪುಗಳಿಗೆ ಸಿಬ್ಬಂದಿಯೇ ಕೆಲಸ ಸೂಚಿಸಬೇಕು. ದಿನಕ್ಕೆ 370ರೂ.ಕೂಲಿ ನಿಗದಿಯಾಗಿದ್ದು, ಕೆಲಸಕ್ಕೆ ತಕ್ಕಂತೆ ಲಾನುಭವಿಗಳ ಖಾತೆಗೆ ಕೂಲಿ ಜಮೆಯಾಗಲಿದೆ ಎಂದರು.

ಕುಡಿವ ನೀರು ಪರೀಕ್ಷೆ: ಗ್ರಾಮಗಳಿಗೆ ಪೂರೈಕೆಯಾಗುವ ಕುಡಿವ ನೀರನ್ನು ಕಡ್ಡಾಯವಾಗಿ ಪರೀಕ್ಷೆಗೊಳಪಡಿಸಬೇಕಿದ್ದು, ಪರೀಕ್ಷಾ ವರದಿಯನ್ನು ಗ್ರಾಪಂ ರಿಜಿಸ್ಟ್ರಾರ್‌ನಲ್ಲಿ ನಮೂದಿಸಬೇಕು. ಪರೀಕ್ಷೆ ಮಾಡಿದ ನೀರನ್ನು ಆರ್‌ಡಬ್ಲ್ಯುಎಸ್ ಇಲಾಖೆಗೆ ಕಳುಹಿಸಬೇಕು ಎಂದರು. ಗ್ರಾಪಂ ವ್ಯಾಪ್ತಿಯಲ್ಲಿ ಬೋರವೆಲ್‌ಗಳ ಮಾಹಿತಿ ಮತ್ತು ನೀರಿನ ಸಮಸ್ಯೆಯ ಕುರಿತು ಮಾಹಿತಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net