ಸಾಹಿತ್ಯ ಕೃತಿಗಳನ್ನು ಮಕ್ಕಳಿಗೂ ಓದಿಸಿ

KASAPA
ಗಂಗಾವತಿ ಸುಶಮೀಂದ್ರ ಭವನದಲ್ಲಿ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಜನಾರ್ದನ ಕುಲ್ಕರ್ಣಿ ಅಲಬನೂರ್ ರಚಿಸಿದ ‘ನಲ್ಬೆಳಗು’ ಪುಸ್ತಕ ಬಿಡುಗಡೆಗೊಳಿಲಾಯಿತು. ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ, ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಮುಮ್ತಾಜ್ ಬೇಗಂ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್ ಇತರರಿದ್ದರು.
Published on

ಗಂಗಾವತಿ: ಹೊಸ ಜ್ಞಾನ ತಿಳಿವಳಿಕೆಗೆ ಓದುವ ಸಂಸ್ಕೃತಿ ರೂಢಿಸಿಕೊಳ್ಳಬೇಕಿದ್ದು, ಸಾಹಿತ್ಯ ಕೃತಿಗಳನ್ನು ಮಕ್ಕಳಿಗೂ ಓದಿಸಬೇಕಿದೆ ಎಂದು ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ. ಪ್ರಾಣೇಶ ಹೇಳಿದರು.

ನಗರದ ಸುಶಮೀಂದ್ರ ಭವನದಲ್ಲಿ ಕಸಾಪ ತಾಲೂಕು ಸಮಿತಿ ಮತ್ತು ಅಲಬನೂರ್ ಕುಲ್ಕರ್ಣಿ ಪ್ರತಿಷ್ಠಾನದಿಂದ ಗುರುವಾರ ಹಮ್ಮಿಕೊಂಡಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಪರಿಪೂರ್ಣತೆಯೆಡೆಗೆ ಸಾಗಬೇಕಾದರೆ ಸತತ ಅಧ್ಯಯನ ಮುಖ್ಯ. ನೀತಿ, ಆದರ್ಶದ ಕೃತಿಗಳ ಓದು ಬದುಕಿಗೆ ಶೋಭೆ. ಉತ್ತಮ ಪುಸ್ತಕ, ಒಳ್ಳೆಯ ಮಿತ್ರ ಬದುಕಿನ ದೊಡ್ಡ ಸಂಪತ್ತು. ನಾವೆಲ್ಲರೂ ಮೊಬೈಲ್ ದಾಸರಾಗದೇ ಪುಸ್ತಕದ ದಾಸರಾಗುವಂತೆ ಸಲಹೆ ನೀಡಿದರು.

ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಡಾ.ಮುಮ್ತಾಜ್ ಬೇಗಂ ಮಾತನಾಡಿ, ಸಾಮಾಜಿಕ ಜಾಲತಾಣಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮ ವಿಚಾರಗಳನ್ನು ಹಂಚಿಕೊಳ್ಳಲು ಜಾಲತಾಣ ವೇದಿಕೆಯಾಗಬೇಕೆಂದರು.

ನಿವೃತ್ತ ಬ್ಯಾಂಕ್ ಅಧಿಕಾರಿ ಜನಾರ್ದನ ಕುಲ್ಕರ್ಣಿ ಅಲಬನೂರ್ ರಚಿಸಿದ ‘ನಲ್ಬೆಳಗು’ ಪುಸ್ತಕ ಬಿಡುಗಡೆಗೊಳಿಲಾಯಿತು. ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ಪ್ರತಿಷ್ಠಾನದ ಪ್ರತಿನಿಧಿ ಕಲಾವತಿ ಕುಲಕರ್ಣಿ, ರಮಾಕಾಂತ ಕುಲ್ಕರ್ಣಿ, ಚಿತ್ರ ನಿರ್ದೇಶಕ ಮಂಜುನಾಥ ಪಾಂಡವಪುರ, ಸಂಶೋಧಕ ಪ್ರೊ.ವಿಜಯಕುಮಾರ ವೈದ್ಯ, ನಿವೃತ್ತ ಅಧಿಕಾರಿಗಳಾದ ರಾಘವೇಂದ್ರ ಮಂಗಳೂರು,ನಾರಾಯಣರಾವ್ ವೈದ್ಯ, ಕಸಾಪ ತಾಲೂಕಾಧ್ಯಕ್ಷ ಶ್ರೀನಿವಾಸ ಅಂಗಡಿ, ಗೌರವ ಕಾರ್ಯದರ್ಶಿ ಶಿವಾನಂದ ತಿಮ್ಮಾಪುರ, ಪ್ರಾಧ್ಯಾಪಕ ಗುಂಡೂರು ಪವನ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net