ಕೇಂದ್ರದಿಂದ ಕಾರ್ಮಿಕ ಹಿತಾಸಕ್ತಿ ಕಡೆಗಣನೆ

MEETING
ಗಂಗಾವತಿ ಶ್ರೀಕೃಷ್ಣದೇವರಾಯ ಕಲಾಭವನದಲ್ಲಿ ಸಿಐಟಿಯು ಜಿಲ್ಲಾ ಘಟಕದಿಂದ ಹಮ್ಮಿಕೊಂಡ ಜಿಲ್ಲಾ ಮಟ್ಟದ 6ನೇ ಸಮ್ಮೇಳನದಲ್ಲಿ ರಾಜ್ಯಕಾರ್ಯದರ್ಶಿ ಸೈಯ್ಯದ್ ಮುಜುಬ್ ಮಾತನಾಡಿದರು. ರಾಜ್ಯ ಉಪಾಧ್ಯಕ್ಷ ಆರ್.ಎಸ್. ಬಸವರಾಜ, ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ, ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಇತರರಿದ್ದರು.
Published on

ಗಂಗಾವತಿ: ಕಾರ್ಮಿಕ ವಿರೋಧಿ ಕಾಯ್ದೆ ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ದುಡಿವ ವರ್ಗವನ್ನು ಹತ್ತಿಕ್ಕುತ್ತಿದ್ದು, ಕಾರ್ಮಿಕ ಹಿತಾಸಕ್ತಿ ಕಡೆಗಣಿಸಿದೆ ಎಂದು ಸಿಐಟಿಯು ರಾಜ್ಯಕಾರ್ಯದರ್ಶಿ ಸೈಯ್ಯದ ಮುಜುಬ್ ಹೇಳಿದರು.

ನಗರದ ಶ್ರೀಕೃಷ್ಣದೇವರಾಯ ಕಲಾಭವನದಲ್ಲಿ ಸಿಐಟಿಯು ಜಿಲ್ಲಾ ಘಟಕದಿಂದ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಆರನೇ ಸಮ್ಮೇಳನದಲ್ಲಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೀತಿಗಳು ಕಾರ್ಮಿಕರನ್ನು ಸಂಕಷ್ಟಕ್ಕೆ ದೂಡಿದ್ದು, ಕನಿಷ್ಠ ಸೌಲಭ್ಯಗಳು ದೊರೆಯುತ್ತಿಲ್ಲ. ಅನಗತ್ಯ ತೆರಿಗೆ ವಿಧಿಸುವ ಮೂಲದ ಸಾರ್ವಜನಿಕರನ್ನು ಶೋಷಿಸುತ್ತಿವೆ. ಉದ್ಯೋಗ ಸೃಷ್ಟಿಸದ ಪರಿಣಾಮ ಗ್ರಾಮೀಣ ಭಾಗದ ಜನತೆ ವಲಸೆ ಹೋಗುವ ಸ್ಥಿತಿ ಬಂದಿದೆ ಎಂದರು.

ರಾಜ್ಯ ಉಪಾಧ್ಯಕ್ಷ ಆರ್.ಎಸ್. ಬಸವರಾಜ ಮಾತನಾಡಿ, ಎಲ್ಲ ವಿಭಾಗದ ಕಾರ್ಮಿಕರಿಗೆ ಕನಿಷ್ಠ ವೇತನ ಯೋಜನೆ ಜಾರಿಗೆ ಹೋರಾಟ ಹಮ್ಮಿಕೊಳ್ಳಬೇಕಿದೆ ಎಂದರು. ಜಿಲ್ಲಾ ಕಾರ್ಯದರ್ಶಿ ನಿರುಪಾದಿ ಬೆಣಕಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ ಮಾತನಾಡಿದರು. ರಾಜ್ಯ ಗ್ರಾ.ಪಂ. ನೌಕರರ ಸಂಘದ ಅಧ್ಯಕ್ಷ ಮಂಟನಗೌಡ ನಾಡಗೌಡ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಲಕ್ಷ್ಮೀ ಸೋನಾರ್, ಹುಲಿಗೆಮ್ಮ, ಶಿವಣ್ಣ ಬೆಣಕಲ್, ಕೆ. ಹುಸೇನಪ್ಪ ಹನುಮೇಶ ಕಲ್ಮಂಗಿ, ಮಂಜುನಾಥ ಡಗ್ಗಿ, ಬಾಳಪ್ಪ ಹುಲಿಹೈದರ್, ಮಲ್ಲಪ್ಪ ಮ್ಯಾಗಡೆ, ಪರಶುರಾಂ, ಅನಂತಲಕ್ಷ್ಮೀ ಇತರರು ಇದ್ದರು.

ಜಿಲ್ಲಾ ಘಟಕ ಪದಾಧಿಕಾರಿಗಳ ಆಯ್ಕೆ: ಹನುಮೇಶ ಕಲ್ಮಂಗಿ (ಅಧ್ಯಕ್ಷ), ಮಂಜುನಾಥ ಡಗ್ಗಿ (ಕಾರ್ಯದರ್ಶಿ), ಲಕ್ಷ್ಮೀದೇವಿ ಸೋನಾರ್ (ಕೋಶಾಧಿಕಾರಿ) ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net