ನವವೃಂದಾವನಗಡ್ಡಿಯಲ್ಲಿ ವಿಶೇಷ ಪೂಜೆ

Special Puja
ಗಂಗಾವತಿ ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ನವವೃಂದಾವನಗಡ್ಡಿಗೆ ಹಿರಿಯ ಚಿತ್ರನಟ ವಿ.ರವಿಚಂದ್ರನ್ ಪುತ್ರ ಮನೋರಂಜನ್, ಸಂಗೀತಾ ಮತ್ತು ಕುಟುಂಬ ಸದಸ್ಯರು ಶನಿವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಆನೆಗೊಂದಿ ರಾಯರ ಮಠದ ವ್ಯವಸ್ಥಾಪಕ ಸುಮಂತಕುಲ್ಕರ್ಣಿ ಇಡಪನೂರ್, ಅರ್ಚಕರಾದ ನರಸಿಂಹಾಚಾರ್, ವಿಜಯೇಂದ್ರಾಚಾರ್ ಚಳ್ಳಾರಿ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ನವವೃಂದಾವನಗಡ್ಡಿಗೆ ಹಿರಿಯ ಚಿತ್ರನಟ ವಿ.ರವಿಚಂದ್ರನ್ ಪುತ್ರ ಮನೋರಂಜನ್ ಮತ್ತು ಕುಟುಂಬ ಸದಸ್ಯರು ಶನಿವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪತ್ನಿ ಸಂಗೀತಾರೊಂದಿಗೆ ಆನೆಗೊಂದಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿ, ಯತಿವರ್ಯರ ಕುರಿತು ಮಾಹಿತಿ ಪಡೆದುಕೊಂಡರು.

ನಂತರ ಯಾಂತ್ರಿಕ ದೋಣಿಯಲ್ಲಿ ನವವೃಂದಾವನಗಡ್ಡಿಗೆ ತೆರಳಿ, ಅಲ್ಲಿನ ಯತಿವರ್ಯರಿಗೆ ವಿಶೇಷ ಪೂಜೆ ಸಲ್ಲಿಸಿದರು. ನವವೃಂದಾನಗಡ್ಡಿಯಲ್ಲಿನ ಐತಿಹ್ಯ ಮತ್ತು ಯತಿವರ್ಯರ ಕುರಿತು ಆನೆಗೊಂದಿ ರಾಯರ ಮಠದ ವ್ಯವಸ್ಥಾಪಕ ಸುಮಂತ ಕುಲ್ಕರ್ಣಿ ಇಡಪನೂರ್ ಮಾಹಿತಿ ನೀಡಿದರು.

ಅರ್ಚಕರಾದ ನರಸಿಂಹಾಚಾರ್, ಚಳ್ಳಾರಿ ವಿಜಯೇಂದ್ರಾಚಾರ್ ಇತರರಿದ್ದರು. ಆನೆಗೊಂದಿ, ಹಂಪಿ ಭಾಗಕ್ಕೆ ಎರಡು ದಿನಗಳ ಭೇಟಿಗಾಗಿ ಬಂದಿರುವ ಮನೋರಂಜನ್ ಕುಟುಂಬದವರು ಐತಿಹಾಸಿಕ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net