ಗ್ರಾಮಗಳು ಸವಾರ್ಂಗೀಣ ಅಭಿವದ್ಧಿ ಹೊಂದಲಿ

Panchayat Raj Divas
ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಗ್ರಾಪಂ ಕಚೇರಿ ಮುಂದೆ ರಾಷ್ಟ್ರೀಯ ಪಂಚಾಯತ್‌ರಾಜ್ ದಿವಸ್ ಆಚರಿಸಲಾಯಿತು. ಪಿಡಿಒ ಸುರೇಶ ಛಲುವಾದಿ, ಸದಸ್ಯ ಪೀರ್ ಮಹ್ಮದ್, ಕಾರ್ಯದರ್ಶಿ ಈಶಪ್ಪ ಇತರರಿದ್ದರು.
Published on

ಗಂಗಾವತಿ: ಗ್ರಾಮಾಭಿವೃದ್ಧಿಗೆ ಜನರ ಸಹಕಾರ ಅಗತ್ಯವಿದ್ದು, ವಿವಿಧ ಯೋಜನೆಗಳಡಿ ಸಜನೆಯಾದ ಆಸ್ತಿಗಳ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಗ್ರಾಪಂ ಪಿಡಿಒ ಸುರೇಶ ಛಲುವಾದಿ ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಗ್ರಾಪಂ ಕಚೇರಿ ಮುಂದೆ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಂಚಾಯತ್‌ರಾಜ್ ದಿವಸ್ ಆಚರಿಸಿ ಮಾತನಾಡಿದರು.

ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಗಳು ಪಂಚಾಯತ್ ರಾಜ್ ಮತ್ತು ನಗರಸ್ಥಳೀಯ ಸಂಸ್ಥೆಗಳಿಗೆ ಬಲತುಂಬಿದ್ದು, 73ನೇ ತಿದ್ದುಪಡಿಯಂತೆ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಪ್ರತಿಹಂತದ ಪಂಚಾಯತ್ ರಾಜ್ ಸಂಸ್ಥೆಗೆ ಅದರದೇ ಆದ ಜವಾಬ್ದಾರಿ ನಕ್ಷೆಯನ್ನು ನೀಡಲಾಗಿದೆ.

ಗ್ರಾಮಪಂಚಾಯತಿಗಳು ತಳಮಟ್ಟದ ಗ್ರಾಮರಾಜ್ ಸಂಸ್ಥೆಗಳಾಗಿವೆ. ಮಹಾತ್ಮಗಾಂಧಿಯವರ ಆಶಯದಂತೆ ಗ್ರಾಮ ಸ್ವರಾಜ್ ನಿರ್ಮಾಣವಾಗಬೇಕಾದರೆ ಗ್ರಾಮಗಳ ಸವಾರ್ಂಗೀಣ ಅಭಿವದ್ಧಿ ಆಗಬೇಕೆಂದರು. ಗ್ರಾಮೀಣಾಭಿವದ್ಧಿಯಲ್ಲಿ ಗ್ರಾಮ ಸಭೆಗಳು, ವಾರ್ಡ್ ಸಭೆಗಳ ಮಹತ್ವ ತಿಳಿಸಿದರು. ಪ್ರತಿಜ್ಞಾವಿಧಿ ಬೋಧಿಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net