ಗಂಗಾವತಿಯ ವಿವಿಧ ವಾರ್ಡ್‌ಗಳ ಮನೆಗಳಲ್ಲಿ ಕಳವು ಮಾಡಿದ್ದವರ ಸೆರೆ

POLICE OPARATION
ಗಂಗಾವತಿ ವಿವಿಧ ವಾರ್ಡ್‌ಗಳಲ್ಲಿ ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿ, ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿರುವುದು. ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ಪ್ರೊಬೆಷನರಿ ಡಿವೈಎಸ್ಪಿ ಕೆ.ವೈ.ರವಿಕುಮಾರ, ನಗರ ಪಿಐ ಅಡಿವೇಶ ಎನ್. ಗುದಿಗೊಪ್ಪ ಇತರರಿದ್ದರು.
Published on

ಗಂಗಾವತಿ: ನಗರದ ವಿವಿಧ ವಾರ್ಡ್‌ಗಳಲ್ಲಿ ಕಳವು ಮಾಡಿದ್ದ ನಾಲ್ವರನ್ನು ನಗರ ಪೊಲೀಸರು ಬುಧವಾರ ಬಂಧಿಸಿದ್ದು, 8.85 ಲಕ್ಷ ರೂ.ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಗೌಸಿಯಾ ಕಾಲನಿಯ ಖಾಜಾ ಹುಸೇನ್‌ಸಾಬ್, ಮಹೆಬೂಬ್ ನಗರದ ಗೌಸ್‌ಪಾಷಾ ಜಾವೀದ್ ಅಲಿ, ಹನ್ೀ ಶಕ್ಷಾವಲಿ, ಸೋಹೆಲ್ ಜಾರ್‌ಸಾಬ್‌ರನ್ನು ಬಂಧಿಸಿದ್ದು, 6.35 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2.50 ಲಕ್ಷ ರೂ. ಮೌಲ್ಯದ ಬೆಳ್ಳಿ ಸಾಮಗ್ರಿ ಮತ್ತು ನಾಲ್ಕು ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಯನಗರ, ಮಹೆಬೂಬ್ ನಗರ ಮತ್ತು ಇಸ್ಲಾಂಪುರದಲ್ಲಿ 2022-23ರಲ್ಲಿ ನಾಲ್ಕು ಮನೆಗಳಲ್ಲಿ ಕಳ್ಳತನವಾಗಿದ್ದು, ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಕಳ್ಳರ ಸೆರೆಗಾಗಿ ನಗರ ಪಿಐ ಅಡಿವೇಶನ್ ಎನ್.ಗುದಿಗೊಪ್ಪ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ತಿಳಿಸಿದರು. ಪ್ರೊಬೆಷನರಿ ಡಿವೈಎಸ್ಪಿ ಕೆ.ವೈ.ರವಿಕುಮಾರ, ನಗರ ಪಿಐ ಅಡಿವೇಶನ್ ಎನ್.ಗುದಿಗೊಪ್ಪ, ಪಿಎಸ್‌ಐ ಕಾಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net