ಕೊಲೆ ಅಪರಾಧಿಗಳನ್ನು ಬಂಧಿಸಲು ಸಿಪಿಐ(ಎಂ) ತಾಲೂಕು ಸಮಿತಿಯಿಂದ ಪ್ರತಿಭಟನೆ

Gangavati CPIM Protest
ಸಿಪಿಐ(ಎಂ) ತಾಲೂಕು ಸಮಿತಿಯಿಂದ ಗಂಗಾವತಿ ಸಮಾಜ ಕಲ್ಯಾಣ ಇಲಾಖೆ ಕಚೇರಿ ಸಹಾಯಕ ಸಿ.ರಾಮಾಂಜನೇಯಪ್ಪಗೆ ಗುರುವಾರ ಮನವಿ ಸಲ್ಲಿಸಲಾಯಿತು.
Published on

ಗಂಗಾವತಿ: ಕಾರಟಗಿ ತಾಲೂಕಿನ ಬರಗೂರಿನಲ್ಲಿ ನಡೆದ ದಲಿತ ಯುವಕ ಕೊಲೆ ಅಪರಾಧಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಸಿಪಿಐ(ಎಂ) ತಾಲೂಕು ಸಮಿತಿ ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿತು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಎಂ.ಬಸವರಾಜ ಮಾತನಾಡಿ, ಕಾರಟಗಿ ತಾಲೂಕಿನ ಬರಗೂರಿನಲ್ಲಿ ದಲಿತ ಯುವಕ ದಾನಪ್ಪ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಅಪರಾಧಿಗಳನ್ನು ಇನ್ನೂ ಬಂಧಿಸಿಲ್ಲ. ದಾನಪ್ಪ ಕುಟುಂಬಕ್ಕೆ ಪರಿಹಾರ ನೀಡುವಲ್ಲಿ ಕೂಡ ಸರ್ಕಾರ ವಿಲವಾಗಿದೆ. ಕೊಲೆ ಅಪರಾಧಿಗಳನ್ನು ಶೀಘ್ರ ಬಂಧಿಸಬೇಕು. ದಾನಪ್ಪ ಕುಟುಂಬಕ್ಕೆ ಎರಡು ಎಕರೆ ಜಮೀನು ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಆರು ತಿಂಗಳಿಗಾಗುವಷ್ಟು ಪಡಿತರ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.

ಪದಾಧಿಕಾರಿಗಳಾದ ಗ್ಯಾನೇಶ ಕಡಗದ್, ಕೆ.ಹುಸೇನಪ್ಪ, ಮಂಜುನಾಥ ಡಗ್ಗಿ, ಜಿ.ಬಸವರಾಜ್, ದುರುಗೇಶ ಮರಕುಂಬಿ, ಬಾಳಪ್ಪ ಹುಲಿಹೈದರ್, ಬಿ.ರಮೇಶ, ಕೃಷ್ಣಪ್ಪ ನಾಯಕ, ಎಂ.ಡಿ. ಚಂದೂಸಾಬ್ ಹಾಗೂ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net