

ಗಂಗಾವತಿ: ಮಳೆಗಾಲ ಹಿನ್ನೆಲೆಯಲ್ಲಿ ಜೆಸ್ಕಾಂ ಉಪವಿಭಾಗ ಕಚೇರಿಯಿಂದ ವಿದ್ಯುತ್ ಪರಿವರ್ತಕ ಮತ್ತು ಸಂಪರ್ಕ ಮಾರ್ಗಗಳ ಸ್ವಚ್ಛತಾಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು.
ನಗರದ 35 ವಾರ್ಡ್‌ಗಳಲ್ಲಿ ಏಕಕಾಲಕ್ಕೆ ಅಭಿಯಾನ ಆರಂಭವಾಗಿದ್ದು, ವಿದ್ಯುತ್ ಪರಿವರ್ತಕ, ಪೂರೈಕೆ ಮಾರ್ಗಗಳು ಮತ್ತು ವಿದ್ಯುತ್ ಕಂಬಗಳನ್ನು ಆವರಿಸಿಕೊಂಡ ಮುಳ್ಳು ಕಂಟೆಗಳು, ಬಳ್ಳಿಗಳು, ಮರದ ಕೊಂಬೆಗಳನ್ನು ತೆರವುಗೊಳಿಸಲಾಯಿತು. ಸ್ವಚ್ಛತಾಭಿಯಾನದಿಂದ ಸಂಭವನೀಯ ವಿದ್ಯುತ್ ಅಪಘಾತ ನಿಯಂತ್ರಿಸಲು ಸಾಧ್ಯವಿದ್ದು, ವಿದ್ಯುತ್ ವ್ಯತಯ್ಯ ನಿಯಂತ್ರಿಸಲಾಗುವುದು.
ಈ ಬಗ್ಗೆ ಜೆಸ್ಕಾಂ ಎಇಇ ಎಂ.ವೀರೇಶ ಮಾತನಾಡಿ, ಮಳೆ, ಗಾಳಿಯಿಂದ ವಿದ್ಯುತ್ ಮಾರ್ಗಗಳಲ್ಲಿ ತೊಂದರೆಯಾಗುತ್ತಿದ್ದು, ವಿದ್ಯುತ್ ವ್ಯತ್ಯಯಕ್ಕೂ ಕಾರಣವಾಗಲಿದೆ. ಹೀಗಾಗಿ ಸ್ವಚ್ಛತಾಭಿಯಾನ ಮೂಲಕ ನಿರ್ವಹಣೆ ಕೈಗೆತ್ತಿಕೊಳ್ಳಲಾಗಿದೆ. ವಿದ್ಯುತ್ ಪರಿವರ್ತಕ, ಕಂಬ, ಮಾರ್ಗ ಮತ್ತು ವಿದ್ಯುತ್ ಸಂಬಂಧಿಸಿದ ಘಟಕಗಳ ಬಳಿ ಬಟ್ಟೆ ಒಣ ಹಾಕುವುದು, ಜಾನುವಾರುಗಳನ್ನು ಕಟ್ಟುವುದನ್ನು ನಿಷೇಧಿಸಲಾಗಿದೆ.
ಮನೆಯ ಬಳಿ ಹಾದುಹೋಗಿರುವ ವಿದ್ಯುತ್ ಮಾರ್ಗಗಳ ಬಗ್ಗೆಯೂ ಸಾರ್ವಜನಿಕರು ಎಚ್ಚರ ವಹಿಸಬೇಕೆಂದು ಮನವಿ ಮಾಡಿದ್ದಾರೆ. ಜೆಸ್ಕಾಂ ಪವರ್ ಮ್ಯಾನ್‌ಗಳಾದ ಮೋಹನ್, ಗುಲಂಅಲಿ, ವಿನಯ, ಮಂಜುನಾಥ, ಹನುಮೇಶ, ರುದ್ರಪ್ಪ ಇತರರಿದ್ದರು.