ಜಾಗತಿಕ ತಾಪಮಾನ ತಡೆಗೆ ಮರಗಳ ಪೋಷಿಸಿ

SASI
ಗಂಗಾವತಿ ನಗರಸಭೆ ಕಚೇರಿ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದಿಂದ ವನಮಹೋತ್ಸವ ಕಾರ್ಯಕ್ರಮ ಬುಧವಾರ ನಡೆಯಿತು. ತಾಲೂಕಾಧ್ಯಕ್ಷ ಯಮನೂರ್ ಭಟ್, ಪದಾಧಿಕಾರಿಗಳಾದ ಪವನ್ ಕುಮಾರ್ ಗಡ್ಡಿ, ಹುಲಿಯಪ್ಪ ಅರೇಗಾರ್, ಹನುಮೇಶ್ ಕುರುಬರ್ ಇತರರಿದ್ದರು.
Published on

ಗಂಗಾವತಿ: ಮುಂಗಾರು ಹಸಿರೋತ್ಸವ ಹಿನ್ನೆಲೆಯಲ್ಲಿ ನಗರ ವಿವಿಧೆಡೆ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದಿಂದ ವನಮಹೋತ್ಸವ ಬುಧವಾರ ಹಮ್ಮಿಕೊಳ್ಳಲಾಗಿತ್ತು. ನಗರಸಭೆ ಆವರಣ ಸೇರಿ ನಗರದ ಪ್ರಮುಖ ಸ್ಥಳಗಳಲ್ಲಿ ವಿವಿಧ ಬಗೆಯ ಸಸಿಗಳನ್ನು ನೆಟ್ಟ ಕಾರ್ಯಕರ್ತರು, ಅವುಗಳ ರಕ್ಷಣೆ ಸಂಕಲ್ಪ ಕೈಗೊಂಡರು.

ವೇದಿಕೆ ತಾಲೂಕಾಧ್ಯಕ್ಷ ಯಮನೂರ್ ಭಟ್ ಮಾತನಾಡಿ, ಕಾಂಕ್ರಿಟ್ ಯುಗದಲ್ಲಿ ಮರಗಳು ನಾಶವಾಗುತ್ತಿದ್ದು, ಮನುಷ್ಯನ ಸ್ವಾರ್ಥಕ್ಕೆ ಪರಿಸರ ಮೇಲೆ ಪರಿಣಾಮ ಬೀರುತ್ತಿದೆ. ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಮರಗಳನ್ನು ಬೆಳೆಸುವುದೊಂದೇ ಮಾರ್ಗವಾಗಿದ್ದು, ಹೋರಾಟದ ಜತೆಗೆ ಹಸಿರೋತ್ಸವಕ್ಕೂ ಆದ್ಯತೆ ನೀಡಲಾಗುವುದು ಎಂದರು.

ಪದಾಧಿಕಾರಿಗಳಾದ ಪವನ್ ಕುಮಾರ್ ಗಡ್ಡಿ, ಹುಲಿಯಪ್ಪ ಅರೇಗಾರ್, ಹನುಮೇಶ್ ಕುರುಬರ್, ಸುನೀಲ್ ಕುಮಾರ್ ಕುಲಕರ್ಣಿ, ನಯೀಮ್ ಪಾಷಾ, ಮುತ್ತುರಾಜ್ ಕುಷ್ಟಗಿ, ರಮೇಶ್ ಕುಮಾರ್, ಸುರೇಶ್ ಕುಮಾರ್ ಚನ್ನಳ್ಳಿ, ಗಿಡ್ಡಪ್ಪ, ಮಂಜುನಾಥ್ ವೀರಘಂಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net