

ಗಂಗಾವತಿ: ತಂತ್ರಜ್ಞಾನ ದುರ್ಬಳಕೆಯಿಂದ ಸೈಬರ್ ಕ್ರೈಂ ಹೆಚ್ಚಾಗುತ್ತಿದ್ದು, ಸ್ವಾಸ್ತ್ಯ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ತಂತ್ರಜ್ಞಾನ ಬಳಕೆಯತ್ತ ಗಮನಹರಿಸುವಂತೆ ಜೆಎಂಎ್ಸಿ ಹಿರಿಯ ಸಿವಿಲ್ ನ್ಯಾಯಾಧೀಶ ರಮೇಶ ಗಾಣಿಗೇರ್ ಹೇಳಿದರು.
ನಗರದ ಶ್ರೀಕೃಷ್ಣ ಸಭಾಂಗಣದಲ್ಲಿ ಕರ್ನಾಟಕ ಪತ್ರಕರ್ತರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರಾಂತ ಮಟ್ಟದ ಪದಾಧಿಕಾರಿಗಳ ಸಭೆ ಮತ್ತು ತಾಲೂಕು ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ಸಾಮಾಜಿಕ ನ್ಯಾಯ ಒದಗಿಸುವಲಿ ಮಾಧ್ಯಮದ ಪಾತ್ರ ಪ್ರಮುಖವಾಗಿದೆ. ಶೋಷಿತರು, ದುರ್ಬಲರಿಗೆ ನ್ಯಾಯ ನೀಡಲು ಗಮನಹರಿಸಬೇಕು. ತಂತ್ರಜ್ಞಾನ ಬೆಳೆದಂತೆಲ್ಲ ಪತ್ರಿಕೋದ್ಯಮ ಡಿಜಿಟಲೀಕರಣವಾಗುತ್ತಿದ್ದು, ಸಾಮಾಜಿಕ ಜವಾಬ್ದಾರಿಯಿಂದ ವರದಿ ಬಿತ್ತರಿಸಲು ಸಲಹೆ ನೀಡಿದರು. ಸೈಬರ್ ಕ್ರೈಂ ಮತ್ತು ಡಿಜಿಟಲ್ ಮಾಧ್ಯಮ ಕುರಿತು ಉಪನ್ಯಾಸ ನೀಡಿದರು.
ಸಂಘದ ಅಧ್ಯಕ್ಷ ಮುರುಗೇಶ ಶಿವಪೂಜಿ ಮಾತನಾಡಿ, ಸಾಕಷ್ಟು ಪತ್ರಕರ್ತರು ಅರ್ಥಿಕವಾಗಿ ದುರ್ಬಲರಾಗಿದ್ದು, ಸಂಕಷ್ಟದಲ್ಲಿರುವ ಪತ್ರಕರ್ತರಿಗೆ ಸಂಘ ನೆರವಾಗಲಿದೆ ಎಂದರು. ಸಂಘದ ತಾಲೂಕಾಧ್ಯಕ್ಷರಾಗಿ ನಿಯೋಜನೆಗೊಂಡ ಶ್ರೀನಿವಾಸದೇವಿಕೆರೆ ಮತ್ತು ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಎಪಿಎಂಸಿ ಮಾಜಿ ಸದಸ್ಯ ಜೋಗದ ನಾರಾಯಣಪ್ಪ ನಾಯಕ, ಮುಸ್ಲಿಂ ಸಮುದಾಯದ ಧರ್ಮಗುರು ಮುಸ್ತಾ ಕಮಾಲ್ ಪಾಶಾ, ವಕೀಲರ ಸಂಘದ ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ಸದಸ್ಯ ಎಸ್.ಹಾಷುಮುದ್ದೀನ್, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ಮಲ್ಲಿಕಾರ್ಜುನ ಹೊಸ್ಕೇರಾ, ಜಿಲ್ಲಾಧ್ಯಕ್ಷ ಆರ್.ಶರಣಪ್ಪ ಗುಮಗೇರಾ, ಪದಾಧಿಕಾರಿಗಳಾದ ಸುದೇಶಕುಮಾರ, ಸಂಪತ್‌ಕುಮಾರ ಮುಚಳಂಬಿ, ಕೆ.ಗೋಪಾಲ ಸಂಡೂರು, ಅರುಣ್ ಭೂಪಾಲ್, ಬಿ.ಎಚ್.ಎಸ್. ರಾಜು, ಡಿ.ಬಿ.ವಿಜಯಶಂಕರ, ರಮೇಶ ಎಂ.ಭಜಂತ್ರಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಮಂಜುನಾಥ ಅಬ್ಬಿಗೇರಿ, ಶಂಕರ ಕುದರಿಮೋತಿ, ಡಾ.ಅಮರೇಶ ಪಾಟೀಲ್, ಹುಲಿಗೇಶ ದೇವರಮನಿ ಇದ್ದರು. ಪತ್ರಕರ್ತ ಲಿಂಗಾರೆಡ್ಡಿ ವೀ.ಆಲೂರು ಕಾರ್ಯಕ್ರಮ ನಿರ್ವಹಿಸಿದರು.