

ಗಂಗಾವತಿ: ಮಾನಸಿಕ ಒತ್ತಡಕ್ಕೊಳಗಾಗದೇ ಕಾಯಕದಲ್ಲಿ ತೊಡಗಿಕೊಂಡು ಆರೋಗ್ಯಸ್ವಾಸ್ಥ್ಯ ಕಾಪಾಡಬೇಕು ಎಂದು ಉಪವಿಭಾಗ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಈಶ್ವರ ಸವಡಿ ಹೇಳಿದರು.
ನಗರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳ ಕಚೇರಿಯಿಂದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ನಿಮಿತ್ತ ಭಾನುವಾರ ಆಯೋಜಿಸಿದ್ದ ಅರಿವು-ನೆರವು ಕಾರ್ಯಾಗಾರದಲ್ಲಿ ಮಾತನಾಡಿದರು.
ಮಾನಸಿಕತೆ ಸಮಸ್ಯೆ ಅಲ್ಲ, ಆರೋಗ್ಯ ಸಮತೋಲನದಲ್ಲಿ ಏರುಪೇರಾದರೇ ಹೆಚ್ಚಾಗುತ್ತದೆ. ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯಕ್ಕೂ ಗಮನಹರಿಸಬೇಕು. ಕುಟುಂಬದೊಂದಿಗೆ ಉತ್ತಮ ಬಾಂಧವ್ಯ, ನೆಮ್ಮದಿ ಜೀವನ ಮತ್ತು ತಾಳ್ಮೆ ರೂಢಿಸಿಕೊಳ್ಳುವ ಮೂಲಕ ಮಾನಸಿಕ ರೋಗದಿಂದ ದೂರವಿರಲು ಸಾಧ್ಯ ಎಂದರು.
ಮನೋವೈದ್ಯ ವಾದಿರಾಜ್ ಶ್ರೀನಿವಾಸ ಗೋರೆಬಾಳ್ ಮಾತನಾಡಿ, ಉದ್ವೇಗಕ್ಕೊಳಗಾಗದೇ ಸಹನೆಯಿಂದ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಿ. ಒತ್ತಡ ಹೆಚ್ಚಾದಾಗ ತಜ್ಞ ವೈದ್ಯರಲ್ಲಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ಜೆಎಂಎ್ಸಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ ಪಾಟೀಲ್, ತಾಲೂಕು ವೈದ್ಯಾಧಿಕಾರಿ ಗೌರಿಶಂಕರ ಚಿತ್ರಿಕಿ, ಆರೋಗ್ಯ ಕಾರ್ಯಕರ್ತರಾದ ಯಮನೂರಪ್ಪ ಭಜಂತ್ರಿ, ಆಪ್ತ ಸಮಾಲೋಚಕರಾದ ಶಿವಾನಂದ ನಾಯ್ಕರ್, ಪಲ್ಲವಿ ದೇಸಾಯಿ, ರಾಜೀವ್ ಸೇರಿ ಆಶಾ ಕಾರ್ಯಕರ್ತೆಯರಿದ್ದರು.