

ಗಂಗಾವತಿ: ತಾಲೂಕಿನ ಸೂರ್ಯನಾಯಕ ತಾಂಡಾ ಸೇವಾಲಾಲ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೌಷ್ಟಿಕ ಆಹಾರ ಸಪ್ತಾಹ ಮತ್ತು ಪೋಷಣ್ ಮಾಸಾಚರಣೆ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಬಸಾಪಟ್ಟಣ ವಲಯದ ಸೂರ್ಯನಾಯಕ ತಾಂಡಾ ಅಂಗನವಾಡಿ ಕೇಂದ್ರ ಮತ್ತು ಸಿಡಿಪಿಒದಿಂದ ಹಮ್ಮಿಕೊಂಡಿದ್ದು, ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಮತ್ತು ಕಿಶೋರಿಯರಿಗೆ ಪೌಷ್ಟಿಕ ಆಹಾರದ ಮಹತ್ವ ಕುರಿತು ಮಾಹಿತಿ ನೀಡಲಾಯಿತು.
ಎಸಿಡಿಪಿಒ ಪ್ರಸನ್ನ ಕಲ್ಮನಿ ಮಾತನಾಡಿ, ಗರ್ಭಿಣಿ, ಬಾಣಂತಿಯರಿಗೆ ಮಾತೃ ವಂದನಾ ಯೋಜನೆಯಿದ್ದು, ಅಪೌಷ್ಟಿಕತೆಯಿಂದ ಬಳಲುವರಿಗಾಗಿ ೆಷಣ್ ಅಭಿಯಾನವಿದೆ. ರಕ್ತಹೀನತೆಯಿಂದ ಬಳಲುವ ಗರ್ಭಿಣಿಯರಿಗೆ ಕಬ್ಬಿಣಾಂಶ ಹೊಂದಿದ ಮಾತ್ರೆಗಳನ್ನು ವಿತರಿಸಲಾಗುತ್ತಿದೆ ಎಂದರು.
ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನ ಪ್ರಾಶನ ಮಾಡಲಾಗಿದ್ದು, ಸುಕನ್ಯಾ ಸಮದ್ಧಿ ಪಾಸ್ ಪುಸ್ತಕ ವಿತರಿಸಲಾಯಿತು. ಗ್ರಾಪಂ ಸದಸ್ಯರಾದ ಗೌರಮ್ಮ ಶಂಕರನಾಯ್ಕ, ಕನಕರಾಜು, ಮೇಲ್ವಿಚಾಕರಾದ ಶಾಹೀನಾ ಬಾನು, ಶರಣಮ್ಮ, ವಿದ್ಯಾವತಿ, ಆರೋಗ್ಯ ಕಾರ್ಯಕರ್ತೆ ದೇವಮ್ಮ, ಮುಖಂಡ ಹನುಮಂತ ನಾಯ್ಕ, ಆರೋಗ್ಯ ನಿರೀಕ್ಷಕ ಸಂತೋಷ, ಮಹಿಳಾ ಸಬಲೀಕರಣ ಜಿಲ್ಲಾ ಸಂಯೋಜಕರಾದ ಶ್ರೀದೇವಿ, ಾತೀಮಾ ಸೇರಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿದ್ದರು.