

ಗಂಗಾವತಿ: ಜಯನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ವಿಭಾಗದಿಂದ ಗಣಿತ ದಿನ ಶನಿವಾರ ಆಚರಿಸಲಾಯಿತು. ಪೂರ್ವ ಪ್ರಾಥಮಿಕದಿಂದ ಎಸ್ಸೆಸ್ಸೆಲ್ಸಿವರೆಗಿನ ಮಕ್ಕಳು ರೂಪಿಸಿದ ಗಣಿತ ಪರಿಕಲ್ಪನೆ ಮತ್ತು ಮಾದರಿಗಳನ್ನು ಪ್ರದರ್ಶಿಸಲಾಯಿತು.
ಪಾಲಕರಿಗಾಗಿ ಗಣಿತ ಸಂಬಂಧಿಸಿದ ಆಟೋಟಗಳನ್ನು ಆಯೋಜಿಸಲಾಗಿತ್ತು. ಶಾಲಾಡಳಿತ ಮಂಡಳಿ ಅಧ್ಯಕ್ಷ ನೇತ್ರಾಜ್ ಗುರುವಿನ ಮಠ ಮಾತನಾಡಿ, ಗಣಿತಕ್ಕೆ ವಿಶೇಷ ಪ್ರಾಧನ್ಯತೆ ನೀಡಲಾಗುತ್ತಿದ್ದು, ಸರಳೀಕರಣ ಕಲಿಕೆಗೆ ತರಬೇತಿ ನೀಡಲಾಗುವುದು. ಗಣಿತ ವಿಷಯ ಕಬ್ಬಿಣದ ಕಡಲೆ ಅಲ್ಲ ಎಂದು ಮಕ್ಕಳ ಮೂಲಕವೇ ನಿರೂಪಿಸಲಾಗುವುದು ಎಂದರು.
ಮುಖ್ಯಶಿಕ್ಷಕಿ ಸವಿತಾ ಗುರುವಿನ್‌ಮಠ, ಶಿಕ್ಷಕರಾದ ಸಿದ್ದೇಶ, ಮಂಜುನಾಥ, ತೇಜಸ್ವಿನಿ, ತಿಮ್ಮಪ್ಪ, ಸೌಜನ್ಯಾ, ಮಂಜುನಾಥ್ ಕುಮುದಿನಿ, ವಿಜಯಲಕ್ಷ್ಮೀ, ಚಂದ್ರಶೇಖರ್ ಹಾಗೂ ಪಾಲಕರು ಭಾಗವಹಿಸಿದ್ದರು.