ಮರಕುಂಬಿ-ಹಣವಾಳ ರಸ್ತೆ ಅಭಿವೃದ್ಧಿಗೆ ಆಗ್ರಹ

20 gvt 02A
Published on

ಗಂಗಾವತಿ: ತಾಲೂಕಿನ ಮರಕುಂಬಿ-ಹಣವಾಳ ಸಂಪರ್ಕ ರಸ್ತೆ ಅಭಿವೃದ್ಧಿಗೆ ಒತ್ತಾಯಿಸಿ ಮರಕುಂಬಿಯಲ್ಲಿ ಸೋಮವಾರ ಸಂಚಾರ ತಡೆಸಿದ ಗ್ರಾಮಸ್ಥರು, ಸಾರ್ವತ್ರಿಕ ಚುನಾವಣೆ ಬಹಿಷ್ಕಾರ ನಿರ್ಧಾರ ಕೈಗೊಂಡರು.

ಕೇಸರಹಟ್ಟಿ ಮೂಲಕ ಮರಕುಂಬಿ-ಹಣವಾಳ 6 ಕಿ.ಮೀ. ರಸ್ತೆ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಗ್ರಾಮಸ್ಥರು ಹೋರಾಟ ಮಾಡುತ್ತಿದ್ದು, ಅನುದಾನ ಮಂಜೂರಾದರೂ ಕಾಮಗಾರಿ ಆರಂಭವಾಗಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು, ರಸ್ತೆಯಲ್ಲಿ ವಾಹನಗಳ ಓಡಾಟ ತಡೆದು ಶಾಸಕ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಪಂದಿಸದ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದಿದ್ದರಿಂದ ಕೆಲಕಾಲ ಗದ್ದಲ ಉಂಟಾಯಿತು. ನಿಗದಿತ ಅವಧಿಯೊಳಗೆ ಕಾಮಗಾರಿ ಕೈಗೆತ್ತಿಕೊಳ್ಳದಿದ್ದರೆ ಚುನಾವಣೆ ಬಹಿಷ್ಕರಿಸುವ ಬಗ್ಗೆ ೋಷಿಸಿದರು.

ತಾಲೂಕು ಕೇಂದ್ರಕ್ಕೆ ಸಂಚರಿಸಲು ಹಣವಾಳ, ಮರಕುಂಬಿ ಗ್ರಾಮಸ್ಥರಿಗೆ ಪ್ರಮುಖ ರಸ್ತೆಯಾಗಿದ್ದು, ವಿದ್ಯಾರ್ಥಿಗಳು ಮತ್ತು ರೈತರಿಗೆ ಅನುಕೂಲವಾಗಿದೆ. ದುರಸ್ತಿಗಾಗಿ ಈ ಹಿಂದೆಯೂ ಪ್ರತಿಭಟನೆ ನಡೆಸಲಾಗಿತ್ತು. ಇತ್ತೀಚಿಗೆ ಕಾಮಗಾರಿ ಆರಂಭಿಸುವ ಭರವಸೆ ನೀಡಿದ್ದ ಶಾಸಕ ಬಸವರಾಜ ದಢೇಸೂಗೂರು ಮತ್ತು ಜಿಪಂ ಇಂಜಿನಿಯರ್ ವಿಭಾಗದ ಇಂಜಿನಿಯರ್ ಮತ್ತೆ ಗ್ರಾಮದತ್ತ ಮುಖಮಾಡಿಲ್ಲ. ಟೆಂಡರ್ ಪೂರ್ಣಗೊಂಡಿರುವ ಬಗ್ಗೆ ಹೇಳಿದ್ದರೂ, ಗುತ್ತಿಗೆದಾರ ಇನ್ನೂ ಕೆಲಸ ಆರಂಭಿಸಿಲ್ಲ. ದುರಸ್ತಿಗೆ ಮುಂದಾಗದಿದ್ದರೆ ವಿಧಾನಸಭೆ ಚುನಾವಣೆಯಿಂದ ದೂರ ಉಳಿಯುವುದಾಗಿ ಗ್ರಾಮಸ್ಥರಾದ ಮರಕುಂಬಿ ಬಸವರಾಜ್, ಪಂಪಯ್ಯಸ್ವಾಮಿ, ಎಂ.ಶರಣಪ್ಪ, ಶಿವಕುಮಾರ, ಹುಲುಗಪ್ಪ, ಬಸವರಾಜ್, ಈರಣ್ಣ ಇತರರು ತಿಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net