ನಾಗಪುರ ಚಲೋಗೆ ತಹಸೀಲ್ದಾರ್ ಚಾಲನೆ

NAGAPURA CHALO
ದಲಿತಪರ ಸಂಘಟನೆ ಕಾರ್ಯಕರ್ತರು ಹಮ್ಮಿಕೊಂಡಿದ್ದ ನಾಗಪುರ ಚಲೋ ಕಾರ್ಯಕ್ರಮಕ್ಕೆ ಗಂಗಾವತಿ ಅಂಬೇಡ್ಕರ್ ವೃತ್ತದಲ್ಲಿ ತಹಸೀಲ್ದಾರ್ ಯು.ನಾಗರಾಜ್ ಶುಕ್ರವಾರ ಚಾಲನೆ ನೀಡಿದರು. ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ತುಗ್ಲೆಪ್ಪ ದೇಸಾಯಿ, ಅಂಬೇಡ್ಕರ್ ದಲಿತ ಹೋರಾಟ ರಾಜ್ಯ ಸಮಿತಿ ಅಧ್ಯಕ್ಷ ಹುಲುಗಪ್ಪ ಮಾಗಿ, ಪದಾಧಿಕಾರಿಗಳಾದ ಬಸವರಾಜ ಛಲವಾದಿ, ಹುಸೇನಪ್ಪ ಹಂಚಿನಾಳ್ ಇತರರಿದ್ದರು.
Published on

ಗಂಗಾವತಿ: ಮಹಾರಾಷ್ಟ್ರದ ನಾಗಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಬೌದ್ಧ ಸಮ್ಮೇಳನಕ್ಕಾಗಿ ನಗರದ ದಲಿತಪರ ಸಂಘಟನೆ ಕಾರ್ಯಕರ್ತರು ನಾಗಪುರ ಚಲೋ ಕಾರ್ಯಕ್ರಮ ಶುಕ್ರವಾರ ಹಮ್ಮಿಕೊಂಡಿದ್ದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಧರ್ಮದೀಕ್ಷಾ ದಿನದ ನಿಮಿತ್ತ ನಾಗಪುರದಲ್ಲಿ ಪ್ರತಿವರ್ಷ ರಾಷ್ಟ್ರೀಯ ಬೌದ್ಧ ಸಮ್ಮೇಳನ ನಡೆಯುತ್ತಿದ್ದು, ಅಲ್ಲಿ ಸಮಾನತೆಯ ತತ್ವಗಳನ್ನು ಬೋಧಿಸಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ದಲಿತ ಹೋರಾಟ ರಾಜ್ಯ ಸಮಿತಿಯಿಂದ ನಾಗಪುರ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಗರದಿಂದ 200ಕ್ಕೂ ಹೆಚ್ಚು ಕಾರ್ಯಕರ್ತರು ವಿಶೇಷ ಬಸ್ ಮೂಲಕ ತೆರಳಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಆಯೋಜಿಸಿದ್ದ ನಾಗಪುರ ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಸೀಲ್ದಾರ್ ಯು. ನಾಗರಾಜ್, ಕಾರ್ಯಕ್ರಮ ಕುರಿತು ಮಾತನಾಡಿದರು. ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಪಾಟೀಲ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ತುಗ್ಲೆಪ್ಪ ದೇಸಾಯಿ, ಅಂಬೇಡ್ಕರ್ ದಲಿತ ಹೋರಾಟ ರಾಜ್ಯ ಸಮಿತಿ ರಾಜ್ಯ ಸಮಿತಿ ಅಧ್ಯಕ್ಷ ಹುಲುಗಪ್ಪ ಮಾಗಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಬಸವರಾಜ ಛಲವಾದಿ, ತಿಮ್ಮಣ್ಣ ಹಂಚಿನಾಳ್, ಹುಸೇನಪ್ಪ ಹಂಚಿನಾಳ್, ಹೊನ್ನಪ್ಪ ಢಣಾಪುರ, ಮಾನಳ್ಳಿ ಸುರೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net