ವಿದ್ಯಾರ್ಥಿಗಳಿಗಾಗಿ ಪಠ್ಯೇತರ ಚಟುವಟಿಕೆಗೆ ಆದ್ಯತೆ

Untitled design(3)
Published on

ಗಂಗಾವತಿ: ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ವಾರ್ಷಿಕೋತ್ಸವ ನಿಮಿತ್ತ ವಿಜ್ಞಾನ ವಸ್ತು ಪ್ರದರ್ಶನ ಮತ್ತು ುಡ್ ೆಸ್ಟ್ ಮಂಗಳವಾರ ನಡೆಯಿತು.

ನರ್ಸರಿಯಿಂದ ಐದನೇ ತರಗತಿವರಿಗೂ ವಿಜ್ಞಾನ ವಸ್ತು ಪ್ರದರ್ಶನ ಮತ್ತು 6ರಿಂದ 9ನೇ ವರ್ಗದ ವಿದ್ಯಾರ್ಥಿಗಳಿಂದ ುಡ್ ೆಸ್ಟ್ ನಡೆಯಿತು. ಪೌಷ್ಟಿಕ ಆಹಾರ ಸೇವನೆ, ಆರೋಗ್ಯವಂತ ಸಮಾಜ ನಿರ್ಮಾಣದ ಬಗ್ಗೆ ಪಾಲಕರಿಗೆ ಮಾಹಿತಿ ನೀಡಲಾಯಿತು.

ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಜಗನ್ನಾಥ ಆಲ್ಲಂಪಲ್ಲಿ ಮಾತನಾಡಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ಕ್ರಿಯಾಶೀಲರನ್ನಾಗಿ ಮಾಡಲಾಗುತ್ತಿದೆ ಎಂದರು.

ಶಾಲೆಯ ಹಿರಿಯ ಶಿಕ್ಷಕರಾದ ನೀಲಕಂಠಪ್ಪ ಅರಹುಣಸಿ ಮತ್ತು ಉಷಾ ಘನಾತೆ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಮುಖ್ಯಶಿಕ್ಷಕರಾದ ವೀರಣ್ಣ ಅರಹುಣಸಿ, ಕೆ.ಶರಭಣ್ಣ, ಶಾಲೆ ಮುಖ್ಯಶಿಕ್ಷಕಿ ಪ್ರಿಯಾಕುಮಾರಿ, ಆಡಳಿತ ಮಂಡಳಿ ಸದಸ್ಯರಾದ ರಾಮರಾವ್ ಅಲ್ಲಂಪಲ್ಲಿ, ಇಬ್ರಾಹಿಂ, ರಜನಿ ಆಲಂಪಲ್ಲಿ, ಶಾರೋನ್ ಕುಮಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net