

ಗಂಗಾವತಿ: ನಗರದ ಲಿಟಲ್ ಹಾರ್ಟ್ಸ್ ಶಾಲೆಯಲ್ಲಿ ಭಾರತ ರತ್ನ ಸರ್ ಎಂ.ವಿ. ಎಜುಕೇಷನಲ್ ಸೊಸೈಟಿಯಿಂದ ಹಿಂದಿ ದಿವಸ್ ಶನಿವಾರ ಹಮ್ಮಿಕೊಳ್ಳಲಾಗಿತ್ತು.
ದೇಶ ವ್ಯಾಪ್ತಿ ಆವರಿಸಿರುವ ಹಿಂದಿ ಭಾಷೆಯ ಶ್ರೇಷ್ಟತೆ, ಅಗತ್ಯತೆ ಮತ್ತು ಮಹತ್ವ ಕುರಿತು ಹಿಂದಿ ಶಿಕ್ಷಕಿಯರಾದ ಆಲಿಯಾ ಮತ್ತು ಶ್ವೇತಾ ಜೋಶಿ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಜಗನ್ನಾಥ ಆಲ್ಲಂಪಲ್ಲಿ ಮಾತನಾಡಿ, ಭಾರತ ಹಲವು ಭಾಷೆಗಳ ತವರೂರಾದರೂ ಹಿಂದಿಗೆ ಪ್ರಾಮುಖ್ಯತೆಯಿದೆ. ಎಲ್ಲ ಪ್ರಂತ್ಯಗಳಲ್ಲೂ ಆಂಗ್ಲಭಾಷೆ ಚಾಲ್ತಿಯಲ್ಲಿದ್ದರೂ ಸಾಮಾನ್ಯವಾಗಿ ದೇಶದ ಜನರ ಒಡನಾಟಕ್ಕೆ ಹಿಂದಿ ಪ್ರಮುಖ ಭಾಷೆಯಾಗಿ ಹೊರಹೊಮ್ಮಿದೆ ಎಂದರು.
ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಹಿಂದಿ ಭಾಷೆಯ ಅಗತ್ಯತೆ ಮತ್ತು ಮಹತ್ವ ಕುರಿತು ಪ್ರದರ್ಶಿಸಿದ ಕಿರುನಾಟಕ ಗಮನಸೆಳೆಯಿತು. ಹಿಂದಿ ಅಕ್ಷರ ಮಾಲೆಗಳನ್ನೊಳಗೊಂಡ ಗಾಯನ ಪ್ರಸ್ತುತಪಡಿಸಲಾಯಿತು. ಶಿಕ್ಷಕಿಯರಾದ ನಾಜೀಯಾ, ಭಾಗ್ಯಲಕ್ಷ್ಮೀ ಇತರರಿದ್ದರು.