ಎಲ್ಲ ವರ್ಗದ ಮಕ್ಕಳಿಗೂ ಶಿಕ್ಷಣ ಹಕ್ಕು ಸಿಗಲಿ

Legal Awareness-Assisted Workshop
ಗಂಗಾವತಿ ತಾಲೂಕಿನ ಹೇರೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಾಗಾರವನ್ನು ಜೆಎಂಎ್ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ರಮೇಶ ಗಾಣಿಗೇರ್ ಮಂಗಳವಾರ ಉದ್ಘಾಟಿಸಿದರು. ಸಂಘದ ತಾಲೂಕಾಧ್ಯಕ್ಷ ಶರಣಪ್ಪ ಎನ್.ನಾಯಕ, ಕಾರ್ಯದರ್ಶಿ ಎಚ್.ಎಂ. ಮಂಜುನಾಥ, ಪಿಎಸ್‌ಐ ಪರಮೇಶ್ವರಪ್ಪ ಇತರರಿದ್ದರು.
Published on

ಗಂಗಾವತಿ: ಎಲ್ಲ ಕ್ಷೇತ್ರದಲ್ಲೂ ಸಮಾನತೆ ದೊರೆಯಬೇಕಿದ್ದು, ಕಾನೂನಿನ ಅರಿವು ಮೂಲಕ ಹಕ್ಕುಗಳನ್ನು ಪ್ರತಿಯೊಬ್ಬರು ಪಡೆಯಬೇಕಿದೆ ಎಂದು ನಗರದ ಜೆಎಂಎ್ಸಿ ಹಿರಿಯ ಶ್ರೇಣಿ ನ್ಯಾಯಾಧೀಶ ರಮೇಶ ಗಾಣಿಗೇರ್ ಹೇಳಿದರು.

ತಾಲೂಕಿನ ಹೇರೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಸಮಾನತೆ ಬಗ್ಗೆ ಸಂವಿಧಾನದಲ್ಲಿದ್ದು, ಎಲ್ಲ ವರ್ಗದ ಮಕ್ಕಳಿಗೂ ಶೈಕ್ಷಣಿಕ ಹಕ್ಕು ದೊರೆಯಬೇಕಿದೆ. ಹಕ್ಕುಗಳನ್ನು ಪಡೆಯುವ ಮುನ್ನ ಕಾನೂನಿನ ಅರಿವು ಮುಖ್ಯವಾಗಿದ್ದು, ಸಂವಿಧಾನ ಆಶಯಗಳನ್ನು ಈಡೇರಿಸಬೇಕಿದೆ ಎಂದರು.

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಕುರಿತು ವಕೀಲರ ಸಂಘದ ತಾಲೂಕು ಕಾರ್ಯದರ್ಶಿಎಚ್.ಎಂ.ಮಂಜುನಾಥ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ಭಾಷಣ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಎಚ್.ಆರ್. ಸರೋಜಮ್ಮ ಪ್ರೌಢಶಾಲೆ ವಿದ್ಯಾರ್ಥಿನಿಯರಾದ ಕೀರ್ತಿ ಮತ್ತು ಗಾಯತ್ರಿಗೆ ಬಹುಮಾನ ವಿತರಿಸಲಾಯಿತು. ಸಂಘದ ತಾಲೂಕಾಧ್ಯಕ್ಷ ಶರಣಪ್ಪ ಎನ್.ನಾಯಕ, ಪಿಎಸ್‌ಐ ಪರಮೇಶ್ವರಪ್ಪ, ಶಿಕ್ಷಣ ಇಲಾಖೆ ಸಿಆರ್‌ಪಿ ಬೆಟ್ಟದಪ್ಪ, ಮುಖ್ಯಶಿಕ್ಷಕ ಎ.ಅನ್ಸರ್‌ಬಾಷಾ, ಶಿಕ್ಷಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net