ಕೃಷಿಕರ ಒಕ್ಕಲೆಬ್ಬಿಸುವ ತಂತ್ರ ಸಲ್ಲ

PROTEST
ಭೂಸ್ವಾಧೀನ ವಿರುದ್ಧ ಹೋರಾಟ ನಡೆಸುತ್ತಿದ್ದ ರೈತರನ್ನು ಬಂಧಿಸಿದ ಪೊಲೀಸರ ಕ್ರಮ ಖಂಡಿಸಿ ಸಿಪಿಐ (ಎಂ) ತಾಲೂಕು ಸಮಿತಿ ಸದಸ್ಯರು ಗಂಗಾವತಿ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್, ಪದಾಧಿಕಾರಿಗಳಾದ ಬಸವರಾಜ ಮರಕುಂಬಿ, ಮಂಜುನಾಥ ಡಗ್ಗಿ, ಕೆ.ಹುಸೇನಪ್ಪ, ವಲಿ ಮೊಹಿದ್ದೀನ್ ಇತರರಿದ್ದರು.
Published on

ಗಂಗಾವತಿ: ಭೂಸ್ವಾಧೀನ ವಿರುದ್ಧ ಹೋರಾಟ ನಡೆಸುತ್ತಿದ್ದ ರೈತರನ್ನು ಬಂಧಿಸಿರುವ ಪೊಲೀಸರ ಕ್ರಮ ಖಂಡಿಸಿ ಸಿಪಿಐ (ಎಂ) ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಯು.ನಾಗರಾಜ್‌ಗೆ ಮನವಿ ಸಲ್ಲಿಸಿದರು.

ಸಮಿತಿ ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಮಾತನಾಡಿ, ರೈತರ ಭೂಮಿ ಕಸಿದುಕೊಳ್ಳುವುದಿಲ್ಲ ಎಂಬ ಭರವಸೆ ಮೇಲೆ ಅಧಿಕಾರಕ್ಕೆ ಬಂದ ರಾಜ್ಯ ಸರ್ಕಾರ, ಅಧಿಕಾರ ಸಿಕ್ಕ ನಂತರ ರೈತರನ್ನು ಒಕ್ಕಲೆಬ್ಬಿಸಲೆತ್ನಿಸುತ್ತಿದೆ. ದೇವನಹಳ್ಳಿಯಲ್ಲಿ ಬಲವಂತದಿಂದ ಭೂಮಿ ವಶಪಡಿಸಿಕೊಳ್ಳುತ್ತಿದ್ದು, ವಿರೋಧಿಸುವ ರೈತರು ಮತ್ತು ಸಂಘಟನೆ ಸದಸ್ಯರನ್ನು ಬಂಧಿಸುವ ಮೂಲಕ ರಾಜ್ಯ ಸರ್ಕಾರ ಅಮಾನವೀಯತೆಯಿಂದ ವರ್ತಿಸುತ್ತಿದೆ.

ರೈತ ವಿರೋಧಿ ನಡೆ ಅನುಸರಿಸುತ್ತಿರುವ ಸರ್ಕಾರಕ್ಕೆ ಹೋರಾಟದ ಮೂಲಕ ತಕ್ಕ ಉತ್ತರ ನೀಡಲಾಗುವುದು. ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕಿದ್ದು, ಹೋರಾಟಗಾರರ ವಿರುದ್ಧ ದಾಖಲಿಸಿಕೊಂಡ ಪ್ರಕರಣ ಹಿಂಪಡೆಯಬೇಕೆಂದರು.

ಪದಾಧಿಕಾರಿಗಳಾದ ಬಸವರಾಜ ಮರಕುಂಬಿ, ಮಂಜುನಾಥ ಡಗ್ಗಿ, ಕೆ.ಹುಸೇನಪ್ಪ, ವಲಿ ಮೊಹಿದ್ದೀನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net