

ಗಂಗಾವತಿ: ತಾಲೂಕಿನ ಬಂಡ್ರಾಳ್‌ದಲ್ಲಿ ಕರಡಿ ದಾಳಿಗೆ ಕೂಲಿಕಾರ್ಮಿಕ ತೀವ್ರಗಾಯಗೊಂಡಿದ್ದು, ನಗರದ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೊಪ್ಪಳ ತಾಲೂಕಿನ ಹಳೇ ಕುಮಟಾದ ಗಂಗಾಧರ ಗಾಯಗೊಂಡಿದ್ದಾರೆ. ವೆಂಕಟಗಿರಿಯಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುವ ಸಹೋದರಿಯನ್ನು ನೋಡಲು ಬಂಡ್ರಾಳ್ ಬಂದಿದ್ದು, ವೆಂಕಟಗಿರಿ ಬಂಡ್ರಾಳ್ ಮಧ್ಯದ ರಸ್ತೆ ಬದಿಯಲ್ಲಿ ಬೆಳಗಿನ ಜಾವ ಬಹಿರ್ದೆಸೆಗೆ ಹೋಗುತ್ತಿದ್ದಾಗ ಮರಿಯೊಂದಿಗೆ ಬಂದ ಕರಡಿಯೊಂದು ದಾಳಿ ನಡೆಸಿದ್ದರಿಂದ ಕಾಲಿಗೆ ತೀವ್ರ ಪೆಟ್ಟಾಗಿದೆ.
ಸ್ಥಳಕ್ಕೆ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿತ್ತು. ಚಿಕಿತ್ಸೆ ಪಡೆಯುತ್ತಿರುವ ಗಂಗಾಧರನ್ನು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ ನೇತೃತ್ವದ ಮುಖಂಡರು ಭೇಟಿ ನೀಡಿ ಯೋಗ ಕ್ಷೇಮ ವಿಚಾರಿಸಿದರು.
ಸೂಕ್ತ ಚಿಕಿತ್ಸೆ ನೀಡುವಂತೆ ಉಪವಿಭಾಗ ವೈದ್ಯಾಧಿಕಾರಿ ಡಾ. ವೆಂಕಟೇಶರಿಗೆ ಮನವಿ ಮಾಡಿದರು. ಮುಖಂಡರಾದ ಮನೋಹರಗೌಡ ಹೇರೂರು, ಡಿ.ಕೆ.ಆಗೋಲಿ, ಮಂಜುನಾಥ ಕಟ್ಟಿಮನಿ ಇತರರಿದ್ದರು.