ಉದ್ಯಾನಕ್ಕೆ ಕಾಂಪೌಂಡ್ ನಿರ್ಮಿಸಿ

Garden Development
ಗಂಗಾವತಿ ಕುವೆಂಪು ಬಡಾವಣೆಯ ಉದ್ಯಾನವನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಬಡಾವಣೆ ನಿವಾಸಿಗಳು ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿಗೆ ಗುರುವಾರ ಮನವಿ ಸಲ್ಲಿಸಿದರು. ಸ್ಥಳೀಯರಾದ ಎಸ್.ನಾಗರಾಜ್ ಗುತ್ತೇದಾರ್, ಶೇಖರಗೌಡ ಕೆಳಗಿನಗೌಡ್ರು, ಗಾಳಿ ಶಿವಪ್ಪ, ಎಸ್.ಜಿ.ಬಾಹುಬಲಿ, ಚಂದ್ರಶೇಖರ್ ಅಡವಿಹಾಳ್ ಇತರರಿದ್ದರು.
Published on

ಗಂಗಾವತಿ: ನಗರದ ಕುವೆಂಪು ಬಡಾವಣೆಯ ಉದ್ಯಾನ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಬಡಾವಣೆ ನಿವಾಸಿಗಳು ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿಗೆ ಗುರುವಾರ ಮನವಿ ಸಲ್ಲಿಸಿದರು.

ಕುವೆಂಪು, ಜಯನಗರ ಇತರ ಬಡಾವಣೆಯ ನಿವಾಸಿಗಳೊಂದಿಗೆ ಪೌರಾಯುಕ್ತರನ್ನು ಭೇಟಿ ಮಾಡಿದ ಸ್ಥಳೀಯರು, ಉದ್ಯಾನದ ಅದ್ವಾನ ಕುರಿತು ಚರ್ಚಿಸಿದರು. ವಕೀಲ ಎಸ್.ನಾಗರಾಜ್ ಗುತ್ತೇದಾರ್ ಮಾತನಾಡಿ, 3ನೇ ವಾರ್ಡ್ ಕುವೆಂಪು ಬಡಾವಣೆಯಲ್ಲಿ ಉದ್ಯಾನವಿದ್ದು, ಕಾಂಪೌಂಡ್ ಗೋಡೆ ಬಿದ್ದು ಹೋಗಿದೆ.

ಇತ್ತೀಚಿನ ದಿನಗಳಲ್ಲಿ ಅನೈತಿಕ ಚಟುವಟಿಕೆ ಹೆಚ್ಚುತ್ತಿದ್ದು, ಉದ್ಯಾನದಲ್ಲಿರುವ ಸಲಕರಣೆಗಳನ್ನು ಕಿಡಿಗೇಡಿಗಳು ಹಾಳು ಮಾಡುತ್ತಿದ್ದಾರೆ. ಮದ್ಯವ್ಯಸನಿಗಳ ತಾಣವಾಗುತ್ತಿದ್ದು, ಇದರಿಂದ ನಿವಾಸಿಗಳಿಗೆ ಮುಜುಗರವಾಗುತ್ತಿದೆ. ಉದ್ಯಾನ ಸನಿಹದಲ್ಲಿ ಮಹಿಳೆಯರ ಹಾಸ್ಟೆಲ್ ಇದ್ದು, ಉದ್ಯಾನಕ್ಕೆ ಬರುವ ಕಿಡಿಗೇಡಿಗಳ ಹಾವಳಿಯಿಂದ ವಿದ್ಯಾರ್ಥಿನಿಯರು ರೋಸಿ ಹೋಗಿದ್ದಾರೆ. ಕೂಡಲೇ ಕಾಂಪೌಂಡ್ ಗೋಡೆ ನಿರ್ಮಿಸಿ ಉದ್ಯಾನ ಅಭಿವೃದ್ಧಿ ಪಡಿಸಬೇಕೆಂದು ಒತ್ತಾಯಿಸಿದರು.

ನಿವಾಸಿಗಳಾದ ಶೇಖರಗೌಡ ಕೆಳಗಿನಗೌಡ್ರು, ಗಾಳಿ ಶಿವಪ್ಪ, ಎಸ್.ಜಿ.ಬಾಹುಬಲಿ, ಚಂದ್ರಶೇಖರ್ ಅಡವಿಹಾಳ್, ಪಂಪಾಪತಿ ಚವಡಿ, ಜಗದೀಶ ದಾವಣಗೆರೆ, ಹನುಮೇಶ ಜುತ್ತೂರ್, ವಿನಾಯಕ ವರ್ಣೇಕರ್, ಮಂಜುನಾಥ ಹಿರೇಮಠ, ದೊಡ್ಡಯ್ಯ ಜನಾದ್ರಿ, ಶಿವಬಸನಗೌಡ ಪಾಟೀಲ್, ಶಿವಾನಂದ, ಚಂದ್ರಶೇಖರ, ಮಹೆಬೂಬ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net