

ಗಂಗಾವತಿ: ಲಿಂ.ಹಾನಗಲ್ ಕುಮಾರ ಶಿವಯೋಗಿಗಳ 158ನೇ ಜಯಂತ್ಯುತ್ಸವ ನಿಮಿತ್ತ ನಗರದ ಶ್ರೀ ಚನ್ನಮಲ್ಲಿಕಾರ್ಜುನ ಪುರಾಣ ಮಂಟಪದಲ್ಲಿ ಹಾನಗಲ್ ಕುಮಾರ ಸ್ವಾಮಿಗಳ ತೊಟ್ಟಿಲು ಶಾಸ್ತ್ರ ಕಾರ್ಯಕ್ರಮ ಶುಕ್ರವಾರ ಅದ್ದೂರಿಯಾಗಿ ನೆರವೇರಿಸಲಾಯಿತು.
ಜಯಂತ್ಯುತ್ಸವ ಹಿನ್ನೆಲೆಯಲ್ಲಿ ಹಾನಗಲ್ ಕುಮಾರ ಸ್ವಾಮಿಗಳ ಜೀವನ ದರ್ಶನ ಪ್ರವಚನ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ತೊಟ್ಟಿಲು ಶಾಸವನ್ನು ಸಂಪ್ರದಾಯ ಬದ್ಧವಾಗಿ ನೆರವೇರಿಸಲಾಯಿತು. ಕಟ್ಟಿಗೆ ಮತ್ತು ಬೆಳ್ಳಿ ತೊಟ್ಟಿಲು, ಬೆಳ್ಳಿ ಉಡುದಾರ ಸೇರಿ ಬೆಳ್ಳಿಯ ಕಾಣಿಕೆಗಳನ್ನು ಭಕ್ತರು ನೀಡಿದ್ದು, ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.
ಪುರಾಣ ಪ್ರವಚನಕಾರ ಡಾ.ಶಾಂತವೀರ ಶಿವಾಚಾರ್ಯರು ಪ್ರವಚನ ನಡೆಸಿಕೊಟ್ಟಿದ್ದು, ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರು ಸಾನ್ನಿಧ್ಯವಹಿಸಿದ್ದರು. ಮಹಿಳಾ ಘಟಕದ ಪದಾಧಿಕಾರಿಗಳಾದ ನಂದಿನಿ ಮುದ್ಗಲ್, ಶಿಲ್ಪಾ ಶ್ರೀನಿವಾಸ, ಲಕ್ಷ್ಮೀ ವೀರಯ್ಯಸ್ವಾಮಿ, ಸಂಧ್ಯಾ ಹೇರೂರು, ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಪದಾಧಿಕಾರಿಗಳಿದ್ದರು.
ಸದ್ಭಾವನೆ ಯಾತ್ರೆ: 3ನೇ ದಿನದ ಸದ್ಭಾವನೆ ಯಾತ್ರೆ ನಗರದ ಅಮರಭಗತ್ ಸಿಂಗ್ ನಗರ, ಜುಲಾಯಿನಗರ ಸೇರಿ ಇತರಡೆ ಹಮ್ಮಿಕೊಳ್ಳಲಾಗಿತ್ತು. ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಭಾಗವಾಗಿ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಬಳೂಟಗಿ ಶಿವಕುಮಾರ ದೇವರು, ಚಂದ್ರಶೇಖರ ದೇವರು ಆಶೀರ್ವಚನ ನೀಡಿದರು. ಅರಳಹಳ್ಳಿಯ ಶರಣಬಸವ ದೇವರು ಸೇರಿ ಸಮಿತಿ ಪದಾಧಿಕಾರಿಗಳಿದ್ದರು. ನಂತರ ಹಣವಾಳ ದಲ್ಲಿ ಶ್ರೀವೀರಭದ್ರೇಶ್ವರ ದೇವಾಲಯದಿಂದ ಡೊಳ್ಳು-ಭಾಜಾ ಭಜಂತ್ರಿಗಳೊಂದಿಗೆ ಪಾದಯಾತ್ರೆ ಜರುಗಿದ್ದು, ಎಲ್ಲ ಸಮಾಜದ ಮುಖಂಡರಿದ್ದರು.