ಲೋಕಕಲ್ಯಾಣಕ್ಕಾಗಿ ದಿಂಡಿ ಯಾತ್ರೆ

DINDI YATRE
ರಾಯಚೂರಿನಿಂದ ಕೊಪ್ಪಳವರೆಗೆ ಪಾದಯಾತ್ರೆ ಕೈಗೊಂಡ ದಿಂಡಿಯಾತ್ರೆ ತಂಡವನ್ನು ಗಂಗಾವತಿ ತಾಲೂಕಿನ ಮರಳಿಯಲ್ಲಿ ಬುಧವಾರ ಸ್ವಾಗತಿಸಲಾಯಿತು. ತಂಡದ ಮುಖ್ಯಸ್ಥ ರಾಮಾಚಾರ್‌ಜೋಶಿ, ಪಿಎಸ್ಸೆಸ್ಸೆನ್ ನಿರ್ದೇಶಕ ರಮೇಶ ಕುಲ್ಕರ್ಣಿ, ವಿಪ್ರ ಸಮಾಜದ ಮುಖಂಡರಾದ ಪವನ ಕುಲಕರ್ಣಿ, ಮನೋಹರ್ ಜಾಲಿಹಾಳ, ಪ್ರಾಣೇಶ ರಾವ್, ತಾರಾಬಾಯಿ, ಗಿರಿಜಾಬಾಯಿ ಇತರರಿದ್ದರು.
Published on

ಗಂಗಾವತಿ: ರಾಯಚೂರಿನಿಂದ ಕೊಪ್ಪಳದ ಕರ್ಕಿಹಳ್ಳಿವರೆಗೆ ಪಾದಯಾತ್ರೆ ಕೈಗೊಂಡ ದಿಂಡಿ ಯಾತ್ರೆಯ ತಂಡವನ್ನು ತಾಲೂಕಿನ ಮರಳಿಯಲ್ಲಿ ವಿಪ್ರ ಸಮುದಾಯದಿಂದ ಬುಧವಾರ ಸ್ವಾಗತಿಸಲಾಯಿತು.

ಕರ್ಕಿಹಳ್ಳಿಯ ಮೃತ್ಯುಂಜಯ ದೇವಾಲಯದಲ್ಲಿ ಜರುಗಲಿರುವ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ವಿಪ್ರ ಸಮುದಾಯದ ಹಿರಿಯ ಮುಖಂಡರ ರಾಯಚೂರಿನ ರಾಮಾಚಾರ್ ಜೋಶಿ ನೇತೃತ್ವದಲ್ಲಿ ದಿಂಡಿ ಯಾತ್ರೆ ಕೈಗೊಂಡಿದ್ದು, ಪ್ರತಿ ಗ್ರಾಮಗಳಲ್ಲೂ ಲೋಕಕಲ್ಯಾಣಕ್ಕಾಗಿ ಭಜನೆ ಮತ್ತು ಧರ್ಮ ಉಪನ್ಯಾಸ ಹಮ್ಮಿಕೊಳ್ಳಲಾಗುತ್ತಿದೆ.

ಜೂರಟಗಿ ಮೂಲಕ ಮರಳಿಗೆ ಆಗಮಿಸಿದ ತಂಡವನ್ನು, ಪಿಎಸ್ಸೆಸ್ಸೆನ್ ಮಾಜಿ ನಿರ್ದೇಶಕ ರಮೇಶ ಕುಲ್ಕರ್ಣಿ ನೇತೃತ್ವದ ವಿಪ್ರ ಸಮಾಜ ಸ್ವಾಗತಿಸಿ, ಆತಿಥ್ಯ ನೀಡಿತು. ಗ್ರಾಮದಲ್ಲಿ ವಿಶೇಷ ಭಜನೆ ನಡೆಸಿದ ತಂಡ, ಧರ್ಮ ರಕ್ಷಣೆ ಕುರಿತು ಉಪನ್ಯಾಸ ನೀಡಿತು. ದೇವರ ನಾಮಸ್ಮರಣೆಯಿಂದ ಎಲ್ಲವನ್ನು ಪಡೆಯಲು ಸಾಧ್ಯವಿದ್ದು, ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮ ಹೆಚ್ಚಾಗಬೇಕಿದೆ ಎಂದು ಯಾತ್ರೆ ತಂಡದ ಮುಖ್ಯಸ್ಥ ರಾಮಾಚಾರ್ ಜೋಶಿ ಅಭಿಪ್ರಾಯ ಪಟ್ಟರು.

ವಿಪ್ರ ಸಮುದಾಯದ ಮುಖಂಡರಾದ ಪವನ ಕುಲಕರ್ಣಿ, ಮನೋಹರ್ ಜಾಲಿಹಾಳ, ಶೇಷಗಿರಿ ಕುಲಕರ್ಣಿ, ಪ್ರಾಣೇಶ ರಾವ್, ತಾರಾಬಾಯಿ, ಗಿರಿಜಾಬಾಯಿ, ದಿವ್ಯಾ, ರಂಜನಾ ಅಳವಂಡಿ, ಸುಭದ್ರಾಬಾಯಿ, ರಮಾ ಕಾತರಕಿ, ಪವಿತ್ರಾ, ಸೀತಾ ಜಾಲಿಹಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net