ಸಂಘಟಿತ ಹೋರಾಟ ಆಯೋಜನೆ

background121
ಗಂಗಾವತಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತ ಧ್ವನಿ ತಾಲೂಕು ಘಟಕದ ಸಭೆಯಲ್ಲಿ ತಾಲೂಕು ಅಧ್ಯಕ್ಷ ಎಸ್.ಎಚ್.ಮುಧೋಳಗೆ ಆದೇಶ ಪತ್ರ ಶನಿವಾರ ವಿತರಿಸಲಾಯಿತು. ಜಿಲ್ಲಾಧ್ಯಕ್ಷ ಗಿರೀಶ್ ಹಿರೇಮಠ, ಸದಸ್ಯರಾದ ಎಂ.ಡಿ.ಅಲಿ, ಎಂ.ಡಿ.ಗೌಸ್, ಸಿ.ಡಿ.ರಾಮಕೃಷ್ಣ, ಸಲೀಬಾಗವಾನ್, ರಮೇಶ ಕಾಳಿ,ಹುಸೇನಪ್ಪ ಹಂಚಿನಾಳ್ ಇತರರಿದ್ದರು.
Published on

ಗಂಗಾವತಿ: ಸರ್ಕಾರದಿಂದ ದೊರೆಯುವ ಸೌಲಭ್ಯಗಳಿಗಾಗಿ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತ ಧ್ವನಿ ತಾಲೂಕು ಘಟಕದ ನೂತನ ಅಧ್ಯಕ್ಷ ಎಸ್.ಎಚ್.ಮುಧೋಳ ಹೇಳಿದರು.

ಜಿಲ್ಲಾ ಘಟಕದಿಂದ ಶನಿವಾರ ತಾಲೂಕು ಘಟಕ ರಚನೆ ಮತ್ತು ವಿಶೇಷ ಸಭೆಯಲ್ಲಿ ಮಾತನಾಡಿದರು. ಶೀಘ್ರವೇ ಪದಾಧಿಕಾರಿಗಳನ್ನು ನೇಮಿಸಲಾಗುವುದು ಎಂದರು. ಸಂಘಟನೆ ಉದ್ದೇಶ, ಪತ್ರಕರ್ತ ಸಮಸ್ಯೆಗಳು, ಪರಿಹಾರಕ್ಕಾಗಿ ಹೋರಾಟ ಕುರಿತು ಜಿಲ್ಲಾಧ್ಯಕ್ಷ ಗಿರೀಶ್ ಹಿರೇಮಠ ಮಾಹಿತಿ ನೀಡಿದರು. ಕುಕನೂರ ತಾಲೂಕು ಘಟಕದ ಅಧ್ಯಕ್ಷ ಸುನೀಲ್ ಕುಮಾರ ಮಠದ್, ಕಾರ್ಯದರ್ಶಿ ವೀರಯ್ಯ ಹಿರೇಮಠ, ಸ್ಥಳೀಯ ಸದಸ್ಯರಾದ ಎಂ.ಡಿ.ಅಲಿ, ಎಂ.ಡಿ.ಗೌಸ್, ಸಿ.ಡಿ.ರಾಮಕೃಷ್ಣ, ಸಲೀಬಾಗವಾನ್, ಶಿವಪ್ಪ ವಿನೋಬನಗರ, ರಮೇಶ ಕಾಳಿ, ನಾಗರಾಜ್ ಕೊಟ್ನೆಕಲ್, ಹುಸೇನಪ್ಪ ಹಂಚಿನಾಳ್, ಮಲ್ಲೇಶ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net